• Tag results for Covid clusters

ಕೋವಿಡ್ ಕ್ಲಸ್ಟರ್ ಗಳ ಬಗ್ಗೆ ರಾಜ್ಯ ಸರ್ಕಾರ ವಿಶೇಷ ನಿಗಾ: ಮುಖ್ಯಮಂತ್ರಿ ಬೊಮ್ಮಾಯಿ

ಒಮಿಕ್ರಾನ್ ಹೊಸ ರೂಪಾಂತರಿ ಬಗ್ಗೆ ವಿಶ್ವದ ರಾಷ್ಟ್ರಗಳು ತಬ್ಬಿಬ್ಬುಗೊಂಡಿವೆ. ಈ ಮಧ್ಯೆ, ಹೊಸ ರೂಪಾಂತರಿಯಿಂದ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ, ರಾಜ್ಯದಲ್ಲಿ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಅನ್ನೋದರ ಬಗ್ಗೆ ತೀವ್ರ ನಿಗಾ ಇರಿಸಿದ್ದೇವೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

published on : 30th November 2021

ಶಾಲೆಗಳು ಕೋವಿಡ್ ಕ್ಲಸ್ಟರ್‌ ಹೊಂದಿರುತ್ತವೆ, ಆದರೆ ಆತಂಕಬೇಡ: ತಜ್ಞರ ಸಲಹೆ

ರಾಜ್ಯಾದ್ಯಂತ ಇದೀಗ ಎಲ್ಲಾ ಶಾಲೆಗಳು ಪುನರಾರಂಭದೊಂದಿಗೆ ಕೋವಿಡ್ ಬಗ್ಗೆ ಪೋಷಕರಲ್ಲಿ ಸ್ವಲ್ಪ ಆತಂಕವಿದ್ದು, ಆರೋಗ್ಯಾಧಿಕಾರಿಗಳು ಜಾಗರೂಕರಾಗಿದ್ದಾರೆ.  ಶಾಲೆಗಳಲ್ಲಿ ಸೋಂಕಿನ ಕ್ಲಸ್ಟರ್  ಖಂಡಿತವಾಗಿಯೂ ಇರುತ್ತವೆ, ಆದರೆ ಜನರು ಭಯಪಡಬಾರದು ಎಂದು ತಜ್ಞರು ಹೇಳಿದ್ದಾರೆ.

published on : 6th November 2021

ಕಾಲೇಜು, ಹಾಸ್ಟೆಲ್ ಗಳಲ್ಲಿನ ಕೋವಿಡ್ ಕ್ಲಸ್ಟರ್ ಆತಂಕ ಸೃಷ್ಟಿಸುತ್ತಿದೆ: ಬಿಬಿಎಂಪಿ

ನಗರದಲ್ಲಿನ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿನ ಕೋವಿಡ್ ಕ್ಲಸ್ಟರ್ ಗಳು ಆತಂಕವನ್ನು ಹೆಚ್ಚಿಸುತ್ತಿದೆ ಎಂಬು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸೋಮವಾರ ಹೇಳಿದ್ದಾರೆ. 

published on : 7th September 2021

ಕೆಲ ಜಿಲ್ಲೆಗಳಲ್ಲಿ ವಿವಾಹ, ಅಂತ್ಯಸಂಸ್ಕಾರ ಕಾರ್ಯಕ್ರಮಗಳಿಂದ ಕೋವಿಡ್-19 ಸೋಂಕು ಪ್ರಸರಣ ಹೆಚ್ಚು

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರೂ ಕೆಲ ಜಿಲ್ಲೆಗಳಲ್ಲಿ ಕೋವಿಡ್ ಕ್ಲಸ್ಟರ್ ಗಳ ರಚನೆ ಆರೋಗ್ಯ ಅಧಿಕಾರಿಗಳನ್ನು ಚಿಂತಿಗೀಡು ಮಾಡಿದೆ. ಇದು ಡೆಲ್ಟಾ ರೂಪಾಂತರ  ಪ್ರಸರಣದೊಂದಿಗೆ ರಾಜ್ಯದಲ್ಲಿ ಸೋಂಕು ಹೆಚ್ಚಾಗಲು ಹೆಚ್ಚಿನ ಅವಧಿ ಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

published on : 17th August 2021

ಕೋವಿಡ್ ಕ್ಲಸ್ಟರ್ ಗಳನ್ನು ಗುರ್ತಿಸಲು 45 ವಾರ್ಡ್ ಗಳಲ್ಲಿ ಕೊಳಚೆ ನೀರು ಪರೀಕ್ಷೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ನಡುವೆ ಸೋಂಕು ಹರಡದಿರಲು ತೀವ್ರ ನಿಗಾವಹಿಸಿರುವ ರಾಜ್ಯ ಸರ್ಕಾರ, ಇದೀಗ ಒಳಚರಂಡಿ, ಕೊಳಚೆನೀರಿನ ಪರೀಕ್ಷೆಗೂ ಮುಂದಾಗಿದೆ.

published on : 28th May 2021

ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಅಬ್ಬರ: 3 ಕ್ಲಸ್ಟರ್'ನಲ್ಲಿ 28 ಮಂದಿಗೆ ಸೋಂಕು, ಹೆಚ್ಚಿದ ಆತಂಕ

ನಗರದಲ್ಲಿ ಶುಕ್ರವಾರ ಒಂದೇ ದಿನ ಕೊರೋನಾ ಸೋಂಕಿನ 3 ಕ್ಲಸ್ಟರ್'ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಯಲಹಂಕದಲ್ಲಿಯೇ 2 ಕಾಲೇಜು ಮತ್ತು ಒಂದು ಅಪಾರ್ಟ್'ಮೆಂಟ್ ನಲ್ಲಿ ಒಟ್ಟು 28 ಮಂದಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

published on : 27th February 2021

ರಾಶಿ ಭವಿಷ್ಯ