• Tag results for IAF

ತಬ್ಲಿಘಿ ಕಾರ್ಯಕ್ರಮಕ್ಕೆ ಓರ್ವ ಐಎಎಫ್ ಸಿಬ್ಬಂದಿ ಭೇಟಿ? 3 ಮಂದಿ ಕ್ವಾರಂಟೈನ್ ಗೆ, ತನಿಖೆ! 

ಲಾಕ್ ಡೌನ್ ನ್ನೂ ಲೆಕ್ಕಿಸದೇ ತಬ್ಲಿಘಿ ಜಮಾತ್‌ ಕಾರ್ಯಕ್ರಮ ನಡೆಯುತ್ತಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರದೇಶಕ್ಕೆ ಅದೇ ದಿನ ಭಾರತೀಯ ವಾಯುಪಡೆ (ಐಎಎಫ್) ನ ಓರ್ವ ಸಿಬ್ಬಂದಿ ಭೇಟಿ ನೀಡಿದ್ದರು. ಪರಿಣಾಮ ಈಗ ಇಂಡಿಯನ್ ಏರ್ ಫೋರ್ಸ್ ನ ಮೂವರು ಸಿಬ್ಬಂದಿಗಳನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ. 

published on : 5th April 2020

ಕೊರೊನಾ ವೈರಸ್ ಭೀತಿ: ಇರಾನ್ ನಿಂದ 58 ಭಾರತೀಯರನ್ನು ಕರೆತಂದ ವಾಯುಪಡೆ ವಿಮಾನ 

ಕೊರೊನಾ ಪೀಡಿತ ಇರಾನ್ ನಿಂದ 58 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ಮಿಲಿಟರಿ ಸಾಮಗ್ರಿಗಳ ಸಾಗಾಟ ವಿಮಾನದಲ್ಲಿ ಹೊತ್ತುತಂದಿದೆ.

published on : 10th March 2020

ಕೊರೋನಾ ವೈರಸ್; ಇರಾನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನ

ವಿಶ್ವಾದ್ಯಂತ ಕೊರೋನಾ ವೈರಾಣು ಹರಡುತ್ತಿರುವ ಹಿನ್ನೆಲೆಯಲ್ಲಿ ಇರಾನ್ ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತೀಯ ವಾಯುಪಡೆಯ ಸಿ-17 ಯುದ್ಧ ವಿಮಾನ ಸೋಮವಾರ ಪ್ರಯಾಣ ಬೆಳೆಸಲಿದೆ.

published on : 9th March 2020

ಇದೇ ಮೊದಲು! ಶೇ.10 ಜೈವಿಕ ಇಂಧನ ಬಳಸಿ ಲೇಹ್ ನಿಂದ ಹಾರಿದ ಐಎಎಫ್‌ಎಎನ್ -32 

ಇದೇ ಮೊದಲ ಬಾರಿಗೆ ಶೇಕಡಾ 10 ರಷ್ಟು ಭಾರತೀಯ ಜೈವಿಕ ಇಂಧನದಮಿಶ್ರಣವನ್ನು ಹೊಂದಿರುವ ಐಎಎಫ್ ಎಎನ್ -32 ವಿಮಾನವು ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದೆನ್ನಿಸಿದ ಲೆಹ್‌ನ ಕುಶೋಕ್‌ವಿಮಾನ ನಿಲ್ದಾಣಗಳಲ್ಲಿ ಹಾರಾಟದ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಅಧಿಕೃತಮಾಹಿತಿ ಹೊರಬಿದ್ದಿದೆ.

published on : 1st February 2020

ಜಾಮಿಯಾ ಗುಂಡಿನ ದಾಳಿ: ಕಠಿಣ ಕ್ರಮಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಅಮಿತ್ ಶಾ ಖಡಕ್ ಸೂಚನೆ!

ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಹತ್ಯೆ ದಿನದಂದೆ ದೆಹಲಿಯ ಜಾಮಿಯಾ ಬಳಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನಾ ನಿರತರ ಮೇಲೆ ಗೋಪಾಲ್ ಎಂಬಾತ ಗುಂಡು ಹಾರಿಸಿದ್ದು ಈ ಸಂಬಂಧ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.

published on : 30th January 2020

ಚಾಧರ್ ಟ್ರೆಕಿಂಗ್: ಲಡಾಖ್‌ನಲ್ಲಿ 9 ವಿದೇಶಿ ಪ್ರಜೆಗಳು ಸೇರಿದಂತೆ 107 ಚಾರಣಿಗರನ್ನು ರಕ್ಷಿಸಿದ ಭಾರತೀಯ ವಾಯುಪಡೆ

ಪ್ರಸ್ತುತ ನಡೆಯುತ್ತಿರುವ “ಚಾಧರ್ ಟ್ರೆಕ್” ನ ಭಾಗವಾಗಿದ್ದ ಲಡಾಖ್‌ನಲ್ಲಿ ಹೆಪ್ಪುಗಟ್ಟಿದ ಜನ್ಸ್ಕರ್ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 9 ವಿದೇಶಿ ಪ್ರಜೆಗಳು ಸೇರಿದಂತೆ 107 ಚಾರಣಿಗರನ್ನು ಭಾರತೀಯ ವಾಯುಪಡೆ (ಐಎಎಫ್) ಗುರುವಾರ ರಕ್ಷಿಸಿದೆ.

published on : 17th January 2020

ಅನಾಣ್ಯೀಕರಣ ನಂತರ ವಾಯುಪಡೆ 625 ಟನ್ ಹೊಸ ನೋಟುಗಳನ್ನು ಸಾಗಿಸಿತ್ತು: ವಾಯುಪಡೆ ಮಾಜಿ ಮುಖ್ಯಸ್ಥ 

2016ರಲ್ಲಿ ನೋಟು ಅನಾಣ್ಯೀಕರಣ ನಂತರ ಭಾರತೀಯ ವಾಯುಪಡೆ 625 ಟನ್ ಗಳಷ್ಟು ಹೊಸ ನೋಟುಗಳನ್ನು ದೇಶದ ವಿವಿಧ ಕಡೆಗಳಿಗೆ ಸಾಗಾಟ ಮಾಡಿದೆ ಎಂದು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ ಎಸ್ ಧನೋವಾ ಹೇಳಿದ್ದಾರೆ.

published on : 5th January 2020

26/11 ದಾಳಿ ಬಳಿಕ ಪಾಕ್ ಮೇಲಿನ ಪ್ರತಿದಾಳಿಗೆ ಅಂದಿನ ಸರ್ಕಾರ ಅನುಮತಿ ನೀಡಿರಲಿಲ್ಲ: ವಾಯುಪಡೆ ಮಾಜಿ ಮುಖ್ಯಸ್ಥ

26/11 ಮುಂಬೈ ಮೇಲಿನ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಪ್ರತಿ ದಾಳಿಗೆ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ದಾಳಿಯ ಪ್ರಸ್ತಾವವನ್ನು ಅಂದಿನ ಸರ್ಕಾರ ನಿರಾಕರಿಸಿತ್ತು ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬೀರೇಂದ್ರ ಸಿಂಗ್ ಧನೋವಾ ಅವರು ಹೇಳಿದ್ದಾರೆ. 

published on : 29th December 2019

ಕೆಐಎಬಿ ರಾಡಾರ್'ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು

ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳ ಹಾರಾಟದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಾಡಾರ್ ಗಳ ಮೂಲಕ ಕಣ್ಣಿಡಲು ಭಾರತೀಯ ವಾಯುಪಡೆ ಮುಂದಾಗಿದೆ. 

published on : 18th December 2019

ರಫೆಲ್ ವಿಮಾನ ಇದ್ದಿದ್ದರೆ ಭಾರತದೊಳಗಿಂದಲೇ ಬಾಲಾಕೋಟ್ ಮೇಲೆ ದಾಳಿ ಮಾಡಬಹುದಾಗಿತ್ತು: ರಾಜನಾಥ್ ಸಿಂಗ್ 

ರಫೆಲ್ ಯುದ್ಧ ವಿಮಾನ ಮೊದಲೇ ಭಾರತೀಯ ವಾಯುಪಡೆಯಲ್ಲಿ ಇರುತ್ತಿದ್ದರೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಉಗ್ರರ ಶಿಬಿರ ತಾಣವನ್ನು ಪ್ರವೇಶಿಸಿ ದಾಳಿ ಮಾಡುವ ಅಗತ್ಯವಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 15th October 2019

ಬದ್ಗಾಮ್ ಎಂಐ-17 ಪತನದಲ್ಲಿ 6 ಯೋಧರ ಸಾವು ಪ್ರಕರಣ: 6 ಅಧಿಕಾರಗಳ ವಿರುದ್ಧ ಕ್ರಮ

ಫೆಬ್ರವರಿ 27ರಂದು ಶ್ರೀನಗರದ ಬದ್ಗಾಮ್ ನಲ್ಲಿ ಎಂಐ-17 ಕಾಪ್ಟರ್ ಪತನಗೊಂಡು ಆರು ಯೋಧರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಆರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿದೆ.

published on : 14th October 2019

ವಾಯುಸೇನಾ ದಿನ: ಮಿಗ್-21ನಲ್ಲಿ ಸಾಹಸ ಪ್ರದರ್ಶಿಸಿದ ವಿಂಗ್ ಕಮಾಂಡರ್ ಅಭಿನಂದನ್

ಫೆಬ್ರವರಿಯಲ್ಲಿ ನಡೆದಿದ್ದ ಬಾಲಕೋಟ್ ದಾಳಿ ವೇಳೆ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹಾಗೂ ಅವರ ತಂಡ ಮಂಗಳವಾರ  ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ....

published on : 8th October 2019

ಆಗಸದಲ್ಲಿ ಐಎಎಫ್ ದೇಶವನ್ನು ದಿಟ್ಟ, ಬದ್ಧತೆಯಿಂದ ಕಾಪಾಡುತ್ತದೆ: ರಾಷ್ಟ್ರಪತಿ ಕೋವಿಂದ್

ಭಾರತೀಯ ವಾಯುಸೇನೆ ದೇಶವನ್ನು ದಿಟ್ಟ ಹಾಗೂ ಬದ್ಧತೆಯಿಂದ ರಕ್ಷಣೆ ಮಾಡುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಹೇಳಿದ್ದಾರೆ. 

published on : 8th October 2019

87ನೇ ವಾಯುಸೇನಾ ದಿನ: ಯೋಧರಿಗೆ ಪ್ರಧಾನಿ ಮೋದಿ ಕೃತಜ್ಞತೆ

87ನೇ ವಾಯುಸೇನಾ ದಿನ ಹಿನ್ನಲೆಯಲ್ಲಿ ವಾಯುಪಡೆಯ ಧೀರ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ಇಡೀ ರಾಷ್ಟ್ರ ಕೃತಜ್ಞತೆ ಸಲ್ಲಿಸುತ್ತದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. 

published on : 8th October 2019

ಭಾರತೀಯ ವಾಯುಪಡೆಗೆ ವಿಶ್ವದಲ್ಲಿ ನಾಲ್ಕನೇ ಸ್ಥಾನ

ಭಾರತೀಯ ವಾಯುಪಡೆಗೆ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನವಿದೆ. ಅಮೆರಿಕ, ಚೀನಾ  ಮತ್ತು ರಷ್ಯಾದ ನಂತರದ ಸ್ಥಾನ ಪಡೆದುಕೊಂಡಿರುವ  ಭಾರತೀಯ ವಾಯುಪಡೆಗೆ   ಈಗ 87ರ ಸಂಭ್ರಮ. 

published on : 7th October 2019
1 2 3 4 5 6 >