• Tag results for India

ಲಕ್ಷ್ಮಿ ವಿಲಾಸ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್ ಜತೆ ವಿಲೀನಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಅನ್ನು, ಸಿಂಗಾಪುರ ಮೂಲದ ಡಿಬಿಎಸ್‌ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

published on : 25th November 2020

ಮಲಯಾಳಂ ಚಿತ್ರ 'ಜಲ್ಲಿಕಟ್ಟು' ಆಸ್ಕರ್ ಸ್ಪರ್ಧೆಗೆ ಆಯ್ಕೆ!

ಲಿಜೋ ಜೋಸ್‌ ಪೆಲ್ಲಿಸ್ಸೇರಿ ನಿರ್ದೇಶನದ ಮಲಯಾಳಂ ಚಿತ್ರ "ಜಲ್ಲಿಕಟ್ಟು" ಪ್ರತಿಷ್ಠಿತ ಆಸ್ಕರ್‌ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಪ್ರಕಟಿಸಿದೆ.

published on : 25th November 2020

ದೇಶದಲ್ಲಿಂದು 44,376 ಕೊರೋನಾ ಕೇಸ್ ಪತ್ತೆ: ಸೋಂಕಿತರ ಸಂಖ್ಯೆ 92 ಲಕ್ಷ

ದೇಶದಲ್ಲಿಂದು 44,376 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 92 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. 

published on : 25th November 2020

ರೆಟ್ರೋ ಲುಕ್: ಹೊಸ ಜೆರ್ಸಿಯೊಂದಿಗಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ ಶಿಖರ್ ಧವನ್

ಭಾರತ ಕ್ರಿಕೆಟ್ ತಂಡದ ಎಡಗೈ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಮಂಗಳವಾರ ಟೀಮ್ ಇಂಡಿಯಾದ ಹೊಸ ಜೆರ್ಸಿಯೊಂದಿಗಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಧರಿಸಲಿದೆ.

published on : 24th November 2020

ಯಾವುದದು ಪ್ಯಾನ್ ಇಂಡಿಯಾ? ನಮ್ಮ ಹೊಟ್ಟೆ ತುಂಬಿಸಲ್ಲ: ನವರಸ ನಾಯಕ ಜಗ್ಗೇಶ್ ಕಿಡಿ

'ಯಾವುದು ಅದು ಪ್ಯಾನ್‌ ಇಂಡಿಯಾ...? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡಲ್ಲ. ಪ್ಯಾನ್ ಇಂಡಿಯಾದಿಂದ ನಮ್ಮ‌ ಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ‌ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ‌ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ' ಎಂದು ನಟ ಜಗ್ಗೇಶ್ ಕಿಡಿ ಕಾರಿದ್ದಾರೆ.

published on : 24th November 2020

43 ಆ್ಯಪ್ ಬ್ಯಾನ್ ಮಾಡಿ ಮತ್ತೆ ಚೀನಾಗೆ ಶಾಕ್ ಕೊಟ್ಟ ಭಾರತ: ಬ್ಯಾನ್ ಆಗಿರುವ ಆ್ಯಪ್ ಗಳ ಪಟ್ಟಿ!

ರಾಷ್ಟ್ರೀಯ ಭದ್ರತೆ, ಗ್ರಾಹಕ ಸುರಕ್ಷತೆ ಮತ್ತು ಹಿತಾಸಕ್ತಿ ರಕ್ಷಣೆಯ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 43 ಆ್ಯಪ್ ಗಳನ್ನು ಬ್ಯಾನ್ ಮಾಡಿದೆ.

published on : 24th November 2020

ಆಸ್ಟ್ರೇಲಿಯಾ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಆಘಾತ: ರೋಹಿತ್‌, ಇಶಾಂತ್‌ ಆಡುವುದು ಡೌಟ್‌

ಮುಂದಿನ ತಿಂಗಳು ಆರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಿಂದ ಸ್ಟಾರ್ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಹೊರಗುಳಿಯುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆ ಮೂಲಕ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾಗೆ ಭಾರಿ ಆಘಾತ ಉಂಟಾಗಿದೆ.

published on : 24th November 2020

ಕೊಹ್ಲಿ ಅಬ್ಬರಿಸದಿದ್ದರೆ ಆಸಿಸ್ ಗೆ ಭಾರತದ ವಿರುದ್ಧ 4-0 ಅಂತರದ ಗೆಲುವು: ಮೈಕೆಲ್ ಕ್ಲಾರ್ಕ್

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಆಬ್ಬರಿಸದಿದ್ದರೆ ಆಸಿಸ್ ತಂಡಕ್ಕೆ 4-0 ಅಂತರದ ಗೆಲುವು ದೊರೆಯಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

published on : 24th November 2020

ಭೂ ದಾಳಿ ಅವೃತ್ತಿಯ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತದ ಅತ್ಯಂತ ಪ್ರಬಲ ಮತ್ತು ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿ ಭೂದಾಳಿ ಆವೃತ್ತಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

published on : 24th November 2020

'ಕದನ ವಿರಾಮ ಉಲ್ಲಂಘನೆ': ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಪಾಕ್ ಸಮನ್ಸ್

ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಭಾರತೀಯ ಸೇನೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿಭಾರತೀಯ ಹಿರಿಯ ರಾಜತಾಂತ್ರಿಕ ಅಧಿಕಾರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ.

published on : 23rd November 2020

ಭಾರತದ ಟಾಂಗ್ ಗಳಿಗೆ ಪ್ರತಿಕ್ರಿಯಿಸುವುದಿಲ್ಲ: ಡೇವಿಡ್ ವಾರ್ನರ್

ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಭಾರತ ವಿರುದ್ಧದ ಮುಂಬರುವ ಸರಣಿಯ ಸಮಯದಲ್ಲಿ ತಮ್ಮ ಕೋಪವನ್ನು ನಿಯಂತ್ರಿಸುವುದಾಗಿ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ.

published on : 23rd November 2020

8 ತಿಂಗಳ ಹೋರಾಟದ ನಂತರ ಖ್ಯಾತ ಭಾರತೀಯ-ಅಮೆರಿಕನ್ ವೈದ್ಯ ಅಜಯ್ ಲೋಧಾ ಕೊರೋನಾಗೆ ಬಲಿ!

ಕಳೆದ ಎಂಟು ತಿಂಗಳಿನಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದ ಖ್ಯಾತ ಭಾರತೀಯ-ಅಮೆರಿಕನ್ ವೈದ್ಯ ಮತ್ತು ಸಮುದಾಯದ ಮುಖಂಡ ಅಜಯ್ ಲೋಧಾ ಅವರು ಕೊನೆಗೂ ಸಾವನ್ನು ಗೆಲ್ಲಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ.

published on : 23rd November 2020

ಹತ್ಯೆಯಾದ ಜೆಇಎಂ ಉಗ್ರರು ಅಂತರಾಷ್ಟ್ರೀಯ ಗಡಿಯಲ್ಲಿ ಪತ್ತೆಯಾದ ಸುರಂಗದಿಂದ ಭಾರತಕ್ಕೆ ಬಂದಿದ್ದರು!

ಉಗ್ರರ ಕಾರ್ಖಾನೆಯಾಗಿರುವ ಪಾಕಿಸ್ತಾನ ಭಾರತಕ್ಕೆ ಉಗ್ರರನ್ನು ರವಾನಿಸುವ ತನ್ನ ಚಾಳಿಯನ್ನು ಎಂದಿನಿಂತೆ ಮುಂದುವರೆಸಿದೆ. ಭಾರತದೊಳಗೆ ನುಸುಳಲು ಉಗ್ರರಿಗೆ ಪಾಕಿಸ್ತಾನವೇ ಸಹಾಯ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿದೆ. 

published on : 23rd November 2020

ಮೊಬೈಲ್ ನಲ್ಲಿ ಮಾತನಾಡುತ್ತಾ ಯೋಧ ಬೈಕ್ ಚಾಲನೆ: ಪತ್ನಿ ಸಾವು

ಹಂಪ್‌ನಲ್ಲಿ ಬೈಕ್ ಹಾರಿದ್ದರಿಂದ ಹಿಂಬದಿ ಕುಳಿತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ಸಂಭವಿಸಿದೆ.

published on : 23rd November 2020

ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದೆ: ಎಡಿಟರ್ಸ್ ಗಿಲ್ಡ್

ಶಿಲ್ಲಾಂಗ್ ಟೈಮ್ಸ್ ನ ಸಂಪಾದಕರಾದ ಪೆಟ್ರೀಷಿಯಾ ಮುಖಿಮ್ ಅವರ ವಿರುದ್ಧ ಕ್ರಿಮಿನಲ್ ನಡಾವಳಿಗಳನ್ನು ರದ್ದು ಮಾಡುವುದಕ್ಕೆ ಅನುಮತಿ ನೀಡದ ಮೇಘಾಲಯ ಹೈಕೋರ್ಟ್ ನ ನಡೆಯ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.

published on : 23rd November 2020
1 2 3 4 5 6 >