

ಅಹಮದಾಬಾದ್: 10ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ಭಾನುವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಕ್ಷಣಗಣನೆ ಶುರುವಾಗಿದೆ. ಭಾರತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಕೋಟ್ಯಂತರ ಭಾರತೀಯರು ಬೆಳಗ್ಗೆಯಿಂದಲೇ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
ಟಿ20 ಮೊದಲ ಟೂರ್ನಿಯಲ್ಲೇ ಗೆಲುವು
ವಿಶ್ವಕಪ್ ಮೊದಲ ಟೂರ್ನಿಯಲ್ಲೇ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ ಮತ್ತೆ ಕಪ್ ಗೆದ್ದುಕೊಂಡಿದ್ದು ಬರೋಬ್ಬರಿ 17 ವರ್ಷಗಳ ನಂತರ 2024 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡಕ್ಕೆ ಈಗ ಮತ್ತೊಂದು ಸುವರ್ಣ ಅವಕಾಶ. ಈ ಬಾರಿಯ ವಿಶ್ವಕಪ್ ಗೆಲುವು, ಚಾಂಪಿಯನ್ ಪಟ್ಟ ಮಾತ್ರ ಅಲ್ಲದೇ ವಿಶ್ವ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಗೂ ಕಾರಣವಾಗಲಿದೆ.
2007 ರಲ್ಲಿ ಮೊದಲ ಬಾರಿಗೆ ಎಂ ಎಸ್ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಆಗಿ, ವಿಶ್ವಕಪ್ ಮೊದಲ ಚಾಂಪಿಯನ್ಸ್ ಎಂಬ ಹೆಗ್ಗಳಿಗೆ ಪಾತ್ರವಾಗಿತ್ತು. ಆದಾದ ಬಳಿಕ ಸತತ ಪ್ರಯತ್ನಗಳಾಗಿದ್ದರೂ ಭಾರತಕ್ಕೆ ಕಪ್ ಗೆಲ್ಲಲ್ಲು ಆಗಿರಲಿಲ್ಲ. 2014 ರಲ್ಲಿ ಫೈನಲ್ ಗೇರಿದ್ದರು. ಶ್ರೀಲಂಕಾ ವಿರುದ್ಧ ಸೋತು ನಿರಾಸೆ ಅನುಭಸಿತ್ತು.
ಬಳಿಕ ಯಾವುದೇ ವಿಶ್ವಕಪ್‌ನಲ್ಲಿ ಭಾರತಕ್ಕೆ ಚಾಂಪಿಯನ್ ಆಗುವ ಅವಕಾಶವೇ ಸಿಕ್ಕಿರಲಿಲ್ಲ. 2024 ರಲ್ಲಿ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆದ ಭಾರತ, ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತ್ತು. 17 ವರ್ಷಗಳ ಬಹು ದೂರದ ಕಾಯುವಿಕೆ ಬಳಿಕ ಟ್ರೋಪಿ ಬರ ನೀಗಿಸಿಕೊಂಡಿತ್ತು. ಈಗ ಮತ್ತೆ ಅಂತಹದ್ದೆ ಅವಕಾಶ ಸಿಕ್ಕಿದ್ದು, ಮತ್ತೆ ಇತಿಹಾಸ ನಿರ್ಮಿಸಲು ಮೆನ್ ಇನ್ ಬ್ಲ್ಯೂ ಪಡೆ ಸಿದ್ಧವಾಗಿದೆ.
ಹಾಲಿ ಚಾಂಪಿಯನ್ನರನ್ನು ಸದೆಬಡಿದು ಚೊಚ್ಚಲ ಕಪ್ ಗೆಲ್ಲಲು ನ್ಯೂಜಿಲೆಂಡ್ ಕಾಯುತ್ತಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಒಂದು ಪಂದ್ಯದಲ್ಲೂ ಗೆದ್ದಿಲ್ಲ. ಟೂರ್ನಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಎಲ್ಲಾ ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆದ್ದಿದೆ.
Advertisement