2035ರವರೆಗಿನ ಕ್ರಿಕೆಟ್ ಪಂದ್ಯಾವಳಿ ಅಂತಿಮಗೊಳಿಸಿದ ICC: 2029ರ ಚಾಂಪಿಯನ್ಸ್ ಟ್ರೋಫಿ, 2031ರ ODI ವಿಶ್ವಕಪ್‌‌ಗೆ ಭಾರತ ಆತಿಥ್ಯ!

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2035ರವರೆಗೆ ಪ್ರಮುಖ ಪುರುಷರ ಕ್ರಿಕೆಟ್ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಘೋಷಿಸಿದೆ. ಅಂದರಂತೆ ಭಾರತ 2029ರ ಚಾಂಪಿಯನ್ಸ್ ಟ್ರೋಫಿ ಹಾಗೂ 2031ರ ಏಕದಿನ ವಿಶ್ವಕಪ್ ಅನ್ನು ಸಹ ಆಯೋಜಿಸುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಡಳಿಯು ಭಾನುವಾರ 2035ರವರೆಗೆ ಪ್ರಮುಖ ಪುರುಷರ ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆಯನ್ನು ಘೋಷಿಸಿದೆ. ಅಂದರಂತೆ ಭಾರತ 2029ರ ಚಾಂಪಿಯನ್ಸ್ ಟ್ರೋಫಿ ಹಾಗೂ 2031ರ ಏಕದಿನ ವಿಶ್ವಕಪ್ ಅನ್ನು ಸಹ ಆಯೋಜಿಸುತ್ತದೆ. 2031ರ ನಂತರದ ಪಂದ್ಯಾವಳಿಗಳಿಗೆ ಆತಿಥೇಯ ದೇಶಗಳನ್ನು ಘೋಷಿಸಲಾಗಿಲ್ಲವಾದರೂ, ಅವುಗಳ ದಿನಾಂಕಗಳನ್ನು ಸಾರ್ವಜನಿಕಗೊಳಿಸಲಾಗಿದೆ.

ಈ ಐಸಿಸಿ ವೇಳಾಪಟ್ಟಿ 2028ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ನೊಂದಿಗೆ ಪ್ರಾರಂಭವಾಗುತ್ತದೆ. 2035 ರಲ್ಲಿ ಏಕದಿನ ವಿಶ್ವಕಪ್‌ವರೆಗೆ ಮುಂದುವರಿಯುತ್ತದೆ. 2029ರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲು ICC ನಿರ್ಧರಿಸಿದೆ. ಇದರೊಂದಿಗೆ 2031ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯನ್ನು ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಆಯೋಜಿಸಲಿವೆ.

ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೋಗ್ ಗುಪ್ತಾ, ಐಸಿಸಿಯ ಪಂದ್ಯಾವಳಿಗಳು ಮತ್ತು ಈವೆಂಟ್‌ಗಳ ಪೋರ್ಟ್‌ಫೋಲಿಯೊ ಕ್ರಿಕೆಟ್‌ನ ಜಾಗತಿಕ ಮೂಲಸೌಕರ್ಯದ ಪ್ರಮುಖ ಭಾಗವಾಗಿದೆ. ಇವು ಆಟವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತಿಗೆ ಉತ್ತಮ ನಿರ್ದೇಶನ ಮತ್ತು ಸಂದರ್ಭವನ್ನು ಒದಗಿಸುತ್ತದೆ ಎಂದರು. ಇನ್ನು 2035ರ ODI ವಿಶ್ವಕಪ್ ಅನ್ನು ಸಹ ಅಂತಿಮಗೊಳಿಸಲಾಗಿದೆ. ಈ ಪಂದ್ಯಾವಳಿಯನ್ನು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಸಲಾಗುತ್ತದೆ. ಆದರೂ ಆತಿಥೇಯ ದೇಶವನ್ನು ಇನ್ನೂ ನಿರ್ಧರಿಸಲಾಗಿಲ್ಲ.

ಸಂಗ್ರಹ ಚಿತ್ರ
"49 ಸಾಲ್ ಬಾದ್ ಭಿ ಮೇರೆ ಸಾಥ್ ಹೈ"; ಮೊದಲ ಬ್ಯಾಟ್‌ನ ಮಾತೇ ಬೇರೆ...: ಭಾವುಕ ಪೋಸ್ಟ್ ಹಂಚಿಕೊಂಡ ಸಚಿನ್!

2028ರ T20 ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಅಕ್ಟೋಬರ್ 12 ರಿಂದ ನವೆಂಬರ್ 12 ರವರೆಗೆ ನಡೆಯಲಿದೆ. ಮುಂದಿನ ಆವೃತ್ತಿಯನ್ನು 2030ರಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಜಂಟಿಯಾಗಿ ಆಯೋಜಿಸಲಿವೆ. ಇದರ ನಂತರ, T20 ವಿಶ್ವಕಪ್‌ಗಳನ್ನು 2032 ಮತ್ತು 2034 ರಲ್ಲಿ ಸಹ ಆಯೋಜಿಸಲಾಗುವುದು. ಆದಾಗ್ಯೂ, ಎರಡೂ ಪಂದ್ಯಾವಳಿಗಳಿಗೆ ಆತಿಥೇಯ ದೇಶಗಳು ಮತ್ತು ಸ್ಥಳಗಳನ್ನು ಇನ್ನೂ ಘೋಷಿಸಲಾಗಿಲ್ಲ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯವು 2035 ರವರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಜೂನ್‌ನಲ್ಲಿ ನಡೆಯಲಿದೆ. 2029 ಮತ್ತು 2031ರ ಫೈನಲ್‌ಗಳನ್ನು ಇಂಗ್ಲೆಂಡ್ ಆಯೋಜಿಸಲಿದ್ದು, 2033 ಮತ್ತು 2035 ರ ಫೈನಲ್‌ಗಳಿಗೆ ಆತಿಥೇಯ ದೇಶಗಳನ್ನು ನಂತರ ಘೋಷಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X