- Tag results for Kichcha Sudeep
![]() | ಕಿಚ್ಚ ಸುದೀಪ್ @50: ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‍ನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆಸ್ಯಾಂಡಲ್ ವುಡ್ ಬಾದ್ ಶಾ, ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಸೆಪ್ಟೆಂಬರ್ 2ರಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. |
![]() | ಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್-ಕೆಆರ್‌ಜಿ ಸ್ಟುಡಿಯೋಸ್ ಕಾಂಬಿನೇಶನ್‌ನಲ್ಲಿ ಹೈ-ಬಜೆಟ್ ಸಿನಿಮಾ!ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ವಿಶೇಷ ದಿನವನ್ನು ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟನ ಜನ್ಮದಿನದಂದು ಮತ್ತೊಂದು ಹೈಬಜೆಟ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ. |
![]() | 'ಕೆ 46' ಚಿತ್ರಕ್ಕೆ ತಯಾರಿ: ಭರ್ಜರಿ ವರ್ಕೌಟ್ ಫೋಟೋ ಶೇರ್ ಮಾಡಿದ ಕಿಚ್ಚ ಸುದೀಪ್!ಕಿಚ್ಚ ಸುದೀಪ್ ಅವರ ಹೊಸ ಪ್ರಾಜೆಕ್ಟ್‌ಗೆ ತಾತ್ಕಾಲಿಕವಾಗಿ 'ಕೆ 46' ಎಂದು ಹೆಸರಿಸಲಾಗಿದ್ದು, ಚಿತ್ರಕ್ಕಾಗಿ ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರ್ಕೌಟ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ |
![]() | ಹಳೆ ಮುನಿಸು ಮರೆತು ಮತ್ತೆ ಒಂದಾದರೇ ಕಿಚ್ಚ ಸುದೀಪ್-ದರ್ಶನ್?: ಸಂಸದೆ ಸುಮಲತಾ ಹುಟ್ಟುಹಬ್ಬ ಪಾರ್ಟಿಯಲ್ಲಿ ಇಬ್ಬರು ಮುಖಾಮುಖಿಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್(Kichcha Sudeep) ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ಅಭಿಮಾನಿಗಳಿಗೆ ಇದು ಖುಷಿಯ ಸಂಗತಿ ಎನ್ನಬಹುದು. ಈ ಇಬ್ಬರು ನಾಯಕ ನಟರು ಕೆಲವು ವೈಯಕ್ತಿಕ ಕಾರಣಗಳಿಂದ ಆರು ವರ್ಷಗಳ ಹಿಂದೆ ಮುನಿಸಿಕೊಂಡು ದೂರವಾಗಿದ್ದರು. |
![]() | ಸುದೀಪ್ ನಟನೆಯ 'ಕಿಚ್ಚ 46' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ನಟಿ ಸಂಯುಕ್ತಾ ಹೊರನಾಡ್ ಆಸಕ್ತಿದಾಯಕ ಸಿನಿಮಾಗಳೊಂದಿಗೆ ಸಖತ್ ಬ್ಯುಸಿಯಾಗಿದ್ದಾರೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದಲ್ಲೂ ನಟಿಸಿರುವ ಹೊಂದಿಸಿ ಬರೆಯಿರಿ ಮತ್ತು ಕ್ರಾಂತಿ ಸಿನಿಮಾ ನಟಿ, ಇದೀಗ ಕಿಚ್ಚ 46 ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ. |
![]() | ಬಹು ನಿರೀಕ್ಷಿತ ಬಹುಭಾಷಾ ಚಿತ್ರ 'ಕಿಚ್ಚ 46' ಡಿಸೆಂಬರ್ ನಲ್ಲಿ ಬಿಡುಗಡೆನಟ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಚೆನ್ನೈನ ಮಹಾಬಲಿಪುರಂನಲ್ಲಿ ಚಿತ್ರೀಕರಣ ನಡೆಯುತ್ತಿದೆ. ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. |
![]() | ಕಿಚ್ಚ ಸುದೀಪ್'ಗೆ ಸದಾ ಋಣಿಯಾಗಿರುತ್ತೇನೆ: ಬಿಗ್ ಬಾಸ್ ಖ್ಯಾತಿಯ ರಾಜೀವ್ಬಿಗ್ ಬಾಸ್ ಖ್ಯಾತಿಯ ರಾಜೀವ್ ಅಭಿನಯದ ಉಸಿರೆ ಉಸಿರೆ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಮೊದಲ ಹಾಡನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. |
![]() | ಬಹು ನಿರೀಕ್ಷಿತ ಬಹುಭಾಷಾ ಚಿತ್ರ 'ಕಿಚ್ಚ 46' ಚಿತ್ರೀಕರಣ ಪ್ರಾರಂಭಿಸಿದ ಕಿಚ್ಚ ಸುದೀಪ್ಕಿಚ್ಚ ಸುದೀಪ್ ಶನಿವಾರ ತಿರುಪತಿಯಲ್ಲಿ ದೇವರ ಆಶೀರ್ವಾದ ಪಡೆದ ನಂತರ ತಮ್ಮ ಮುಂದಿನ ಬಹುನಿರೀಕ್ಷಿತ 'ಕಿಚ್ಚ 46' ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. |
![]() | ಕಿಚ್ಚ ಸುದೀಪ್-ಎಂ ಎನ್ ಕುಮಾರ್ ನಡುವೆ ವಿವಾದ: ಹಿರಿಯ ನಟ ರವಿಚಂದ್ರನ್ ನಿವಾಸದಲ್ಲಿ ಮಾತುಕತೆಸ್ಯಾಂಡಲ್ ವುಡ್ ನಾಯಕ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (M N Kumar) ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿ ನಂತರ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅಂಗಳಕ್ಕೆ ತಲುಪಿ ಮಾತುಕತೆ ಮೂಲಕ ಬಗೆಹರಿಸಲು ಇಬ್ಬರೂ ಪ್ರಯತ್ನಿಸಿದರು. |
![]() | ಮಾನನಷ್ಟ ಮೊಕದ್ದಮೆ ಅರ್ಜಿ ವಿಚಾರಣೆ ಆಗಸ್ಟ್ 17ಕ್ಕೆ: ಬಾಯಿಗೆ ಬಂದಂತೆ ಮಾತನಾಡಬಾರದು ಎಂದ ಕಿಚ್ಚ ಸುದೀಪ್ನಟ ಕಿಚ್ಚ ಸುದೀಪ್ ಅವರು ತಮ್ಮ ವಿರುದ್ಧ ವಂಚನೆ ಆರೋಪ ಮಾಡಿರುವ ನಿರ್ಮಾಪಕರಾದ ಎನ್ಎಂ ಕುಮಾರ್ ಹಾಗೂ ಸುರೇಶ್ ವಿರುದ್ಧ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. |
![]() | ಕಿಚ್ಚ ಸುದೀಪ್ ನಿಂದಾಗಿ ಲಕ್ಷಗಟ್ಟಲೆ ಕಳೆದುಕೊಂಡಿದ್ದೇನೆ, ಅವರು ನನ್ನ ಹಣ ಕೊಟ್ಬಿಡಲಿ ಸಾಕು: ನಿರ್ಮಾಪಕ ರೆಹಮಾನ್ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿರುವುದರ ಮಧ್ಯೆ ಇದೀಗ ಮೂರನೇ ವ್ಯಕ್ತಿಯ ಎಂಟ್ರಿಯಾಗಿದೆ. ಅದು ಸುದೀಪ್ ನಟನೆಯ ಹುಚ್ಚ, ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರ ನಿರ್ಮಾಪಕ ರೆಹಮಾನ್. |
![]() | ನಿರ್ಮಾಪಕ ಎಂ ಎನ್ ಕುಮಾರ್ ಆರೋಪಗಳ ಸುರಿಮಳೆ: ಚಲನಚಿತ್ರ ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ನಟ ಕಿಚ್ಚ ಸುದೀಪ್ ಹೇಳಿದ್ದೇನು?ನಿರ್ಮಾಪಕ ಎಂ ಎನ್ ಕುಮಾರ್ ಮತ್ತು ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್(Kichcha Sudeep) ನಡುವಿನ ವಿವಾದ ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದೆ. |
![]() | ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಕಿಚ್ಚ ಸುದೀಪ್, ವಿಡಿಯೋ!ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. |
![]() | ಕಿಚ್ಚ ಸುದೀಪ್ ನಿವಾಸ ಮುಂದೆ ಧರಣಿ ನಡೆಸುವುದಾಗಿ ನಿರ್ಮಾಪಕ ಕೆಸಿಎನ್ ಕುಮಾರ್ ಎಚ್ಚರಿಕೆ!ಅಭಿನಯ ಚಕ್ರವರ್ತಿ, ಮಾಣಿಕ್ಯ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಕಿಚ್ಚ ಸುದೀಪ್ ತಮಗೆ ಕೊಟ್ಟಿರುವ ಮಾತನ್ನು ಈಡೇರಿಸದಿದ್ದರೆ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಸ್ಯಾಂಡಲ್ ವುಡ್ ನಿರ್ಮಾಪಕ ಕೆಸಿಎನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. |
![]() | ಕಿಚ್ಚನ ಹೊಸ ಚಿತ್ರ ಅನೌನ್ಸ್: ಮಾಹಿತಿ ಹಂಚಿಕೊಂಡ ನಟವಿಕ್ರಾಂತ್ ರೋಣದಲ್ಲಿ ನಾಯಕರಾಗಿ ಕಾಣಿಸಿಕೊಂಡ ನಂತರ ಕಿಚ್ಚ ಸುದೀಪ್ ಕೆಲ ಸಮಯ ನಟನೆಯಿಂದ ದೂರ ಉಳಿದಿದ್ದರು. ಇತ್ತೀಚೆಗೆ ಮೂರು ಚಿತ್ರಗಳನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು. ಈ ಮಧ್ಯೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ. |