• Tag results for US

ನರೇಗಾ ಯೋಜನೆಯಡಿ 27.5 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗೆ 611 ಕೋಟಿ ವರ್ಗಾಯಿಸಿದ ಸಿಎಂ ಯೋಗಿ ಆದಿತ್ಯನಾಥ್!

21 ದಿನಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ದಿನಗೂಲಿ ಕೆಲಸಗಾರರು ಕಂಗಲಾಗಿದ್ದರು. ಇದಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ನರೇಗಾ ಯೋಜನೆಯಡಿ 27.5 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 611 ಕೋಟಿ ರುಪಾಯಿಯನ್ನು ವರ್ಗಾಹಿಸಿದೆ. 

published on : 30th March 2020

ಶ್ರೀರಂಗಪಟ್ಟಣ: ಕೊರೋನಾ ಭೀತಿ, ಹತ್ತೇ ನಿಮಿಷದಲ್ಲಿ ಮುಗಿದ ಮದುವೆ

ಶ್ರೀರಂಗಪಟ್ಟಣದಲ್ಲಿ ನಿಗದಿಯಾಗಿದ್ದ ವಿವಾಹವನ್ನು ಮನೆ ಮಂದಿ ಸೇರಿ ಕೇವಲ ಹತ್ತೇ ನಿಮಿಷಗಳಲ್ಲಿ ನೆರವೇರಿಸಿದ ಪ್ರಸಂಗ ಕೆಆರ್‌ಎಸ್‌ನಲ್ಲಿ ನಡೆದಿದೆ.

published on : 30th March 2020

ಕೋವಿಡ್‌ 19: ಭಟ್ಕಳ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಶಂಕಿತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಕೊರೋನಾ ಸೋಂಕು ಶಂಕಿತ ಎಂದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಭಾನುವಾರ ರಾತ್ರಿ ಪರಾರಿಯಾಗುವ ಮೂಲಕ ಆತಂಕ ಸೃಷ್ಟಿಸಿದ್ದ ಯುವಕನೊಬ್ಬನನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆಹಚ್ಚಿ ಆಸ್ಪತ್ರೆಗೆ ಮರಳಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

published on : 30th March 2020

ಲಾಕ್ ಡೌನ್ ಮಧ್ಯೆ ಆನ್ ಲೈನ್ ಮೂಲಕ ವೈದ್ಯರ ಸಮಾಲೋಚನೆ

ಕೊರೋನಾ ಭೀತಿಯ ಲಾಕ್ ಡೌನ್ ನಡುವೆ ಆರೋಗ್ಯದ ಬಗ್ಗೆ ಎಲ್ಲರಿಗೂ ಕಾಳಜಿ, ಆತಂಕ ಉಂಟಾಗಿದ್ದು ವೈದ್ಯರನ್ನು ಸಂಪರ್ಕಿಸುವುದು ಹೇಗೆ ಎಂಬ ಪ್ರಶ್ನೆ, ಸಂದೇಹ ಅನೇಕರಲ್ಲಿ ಮೂಡುತ್ತಿದೆ.

published on : 30th March 2020

ಕೋವಿಡ್-19: ಆತಂಕದಲ್ಲಿ ಮೈಸೂರು, ನಂಜನಗೂಡನ್ನ 'ಅತಿ ಸೂಕ್ಷ್ಮ ಪ್ರದೇಶ' ಎಂದು ಘೋಷಣೆ

ಮೈಸೂರಿನ ನಂಜನಗೂಡಿನಲ್ಲಿ ಅತಿ ಹೆಚ್ಚು ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿರುವುದರಿಂದ ಆ ಪ್ರದೇಶವನ್ನು 'ಅತಿ ಸೂಕ್ಷ್ಮ ಪ್ರದೇಶ' ಎಂದು ಜಿಲ್ಲಾಡಳಿತ ಘೋಷಿಸಿದೆ.

published on : 30th March 2020

'ಪಿಎಂ-ಕೇರ್ಸ್'ಗೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ ನೆರವು

ಜಾಗತಿಕ ಪಿಡುಗಾಗಿರುವ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೆರೆದಿರುವ ಪಿಎಂ-ಕೇರ್ಸ್ ಮತ್ತು ಮುಖ್ಯಮಂತ್ರಿ (ಮಹಾರಾಷ್ಟ್ರ) ಪರಿಹಾರ ನಿಧಿಗೆ ನೆರವು ನೀಡುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮ ಸೋಮವಾರ ಹೇಳಿದ್ದಾರೆ.

published on : 30th March 2020

ಲಾಕ್ ಡೌನ್: ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗರು ಆನ್​ಲೈನ್​ನಲ್ಲೇ ಪಡೆಯಬಹುದು ಕರ್ಫ್ಯೂ ಪಾಸ್

ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್‌ಗೆ ಪಾಸ್ ನೀಡಲಾಗುತ್ತಿದೆ.‌‌ ಇತ್ತೀಚೆಗೆ‌  ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು.

published on : 30th March 2020

ರಾಮನಾಮ ಜಪಿಸಿ ಹಿಂದೂ ವ್ಯಕ್ತಿಯ ದೇಹ ಹೊತ್ತೊಯ್ದು ಶವ ಸಂಸ್ಕಾರದಲ್ಲಿ ಪಾಲ್ಗೊಂಡ ಮುಸ್ಲಿಮರು!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂದುವಿನ ಮೃತ ದೇಹವನ್ನು ಸಂಸ್ಕಾರಕ್ಕೆ ಹೊತ್ತೊಯ್ಯುತ್ತ 'ರಾಮ ನಾಮ ಸತ್ಯ ಹೇ' ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಮುಸ್ಲಿಮರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.

published on : 30th March 2020

ಭಾರತದಲ್ಲಿ ನಿಲ್ಲದ ಕೊರೋನಾ ಅಬ್ಬರ: ಗುಜರಾತ್‌ನಲ್ಲಿ 6ನೇ ಸಾವು, ಮೃತರ ಸಂಖ್ಯೆ 31ಕ್ಕೆ ಏರಿಕೆ!

ಕೊರೋನಾ ವೈರಸ್ ಗೆ ಭಾರತದಲ್ಲಿ ಅತೀ ಹೆಚ್ಚು ಮಂದಿ ಸಾವಿಗೀಡಾದ ರಾಜ್ಯಗಳ ಪೈಕಿ ಗುಜರಾತ್ ಎರಡನೇ ಸ್ಥಾನದಲ್ಲಿದ್ದು ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಮಾರಿಗೆ ಬಲಿಯಾದವರ ಸಂಖ್ಯೆ ಸೋಮವಾರ 31ಕ್ಕೇರಿದೆ.

published on : 30th March 2020

ಕೋವಿಡ್-19 ರೋಗಿಗಳನ್ನು ಕಳಂಕಿತರಂತೆ ಕಾಣಬೇಡಿ: ಕೊರೋನಾವೈರಸ್ ಗೆದ್ದುಬಂದ ಮಹಿಳೆಯ ನೋವು!

ಕೊರೋನಾ ವೈರಸ್ ಸೋಂಕು ಜಗತ್ತನ್ನು ಮಹಾಮಾರಿಯಂತೆ ಕಾಡುತ್ತಿದೆ. ಇದಕ್ಕೆ ಸದ್ಯ ಭಯಪಡದವರೇ ಇಲ್ಲ ಎಂಬಂತಾಗಿದೆ. ಕೊರೋನಾ ಸೋಂಕಿತ ವ್ಯಕ್ತಿ ಯಾರು, ಅವರಿಂದ ಸೋಂಕುರಹಿತ ವ್ಯಕ್ತಿಗಳಿಗೆ ಪಸರಿಸಿದರೆ ಏನಾಗುತ್ತದೆ ಎಂಬ ಆತಂಕದಲ್ಲಿ ಎಲ್ಲರೂ ಇದ್ದಾರೆ.

published on : 30th March 2020

ಅಂತ್ಯಸಂಸ್ಕಾರಕ್ಕೆ ಬಾರದ ಕುಟುಂಬಸ್ಥರು: ಕೊರೋನಾ ಪೀಡಿತನ ಅಂತ್ಯಕ್ರಿಯೆ ನೆರವೇರಿಸಿದ ಹೆಲ್ತ್ ವರ್ಕರ್ಸ್

ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಕೊರೊನಾ ವೈರಸ್ ಪೀಡಿತ ವೃದ್ಧನೋರ್ವ ಮೃತಪಟ್ಟಿದ್ದು, ಕುಟುಂಬ ಮತ್ತು ಆಪ್ತರ ಅನುಪಸ್ಥಿತಿಯಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರೇ ಶವಸಂಸ್ಕಾರ ನಡೆಸಿದ ಘಟನೆ ನಡೆದಿದೆ.

published on : 30th March 2020

ಎಣ್ಣೆ ಬೇಕು ಅಣ್ಣ: ಕುಡುಕರ ಆತ್ಮಹತ್ಯೆ ಹೆಚ್ಚಳ ಹಿನ್ನೆಲೆ ಮದ್ಯ ಸರಬರಾಜಿಗೆ ಸರ್ಕಾರ ಆದೇಶ!

ಕೊರೋನಾ ವೈರಸ್ ಹರಡದಂತೆ ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಗೆ ಆದೇಶಿಸಿದ್ದು ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಆದರೆ ಮದ್ಯಕ್ಕೆ ದಾಸರಾಗಿರುವವರು ಮಾತ್ರ ತಮಗೆ ಮದ್ಯ ಬೇಕೇ ಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

published on : 30th March 2020

ಕೋವಿಡ್‌-19 ವಿರುದ್ಧ ಸಮರ: 1 ಕೋಟಿ ರೂ. ದೇಣಿಗೆ ನೀಡಿದ ಕೆಎಸ್‌ಸಿಎ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ 51 ಕೋಟಿ ನೀಡಿದ ಬೆನ್ನಲ್ಲೆ ಇಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲಾ 50 ಲಕ್ಷ ರೂ. ಸೇರಿದಂತೆ ಒಟ್ಟು ಒಂದು ಕೋಟಿ ರೂ.ಗಳ ದೇಣಿಗೆ ನೀಡಿದೆ. 

published on : 30th March 2020

ಕೊರೋನಾ ಲಾಕ್‌ಡೌನ್: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ದಿನಚರಿ ಹೀಗಿದೆ

ಕೋವಿಡ್-19 ಕಾರಣ ದೇಶವೇ ಲಾಕ್ ಡೌನ್ ನಲ್ಲಿರುವ ಈ ಸಮಯದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಸಂಗೀತವೊಂದೇ ಜೀವಸೆಲೆಯಾಗಿದೆ. ಹೃದಯ ಸಮಸ್ಯೆಯಿಂದಾಗಿಉ ಕೆಲ ಕಾಲ ಆಸ್ಪತ್ರೆವಾಸ ಅನುಭವಿಸಿದ್ದ ಜನ್ಯ ಪ್ರಸ್ತುತ ಚೇತರಿಕೆ ಹಾದಿಯಲ್ಲಿದ್ದಾರೆ. ಲಾಕ್‌ಡೌನ್ ತಮಗೆ ಅನುಕೂಲಕರವಾಗಿದೆ ಎನ್ನುವ ಸಂಗೀತ ನಿರ್ದೇಶಕ ಸುಮಾರು 15 ಯೋಜನೆಗಳನ್ನು ಹೊಂದಿದ್ದಾರೆ.ಅವರೀಗ ಬೆ

published on : 30th March 2020

21 ದಿನಗಳ ಭಾರತ ಲಾಕ್ ಡೌನ್ ವಿಸ್ತರಿಸುವ ಯಾವುದೇ ಚಿಂತನೆಗಳಿಲ್ಲ: ಸಂಪುಟ ಕಾರ್ಯದರ್ಶಿ

21 ದಿನಗಳ ಲಾಕ್ ಡೌನ್ ನ್ನು ವಿಸ್ತರಿಸುವ ಯಾವುದೇ ಚಿಂತನೆಗಳಿಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಹೇಳಿದ್ದಾರೆ.

published on : 30th March 2020
1 2 3 4 5 6 >