ಸಿನಿಮಾ ಸುದ್ದಿ'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಐಪಿಎಲ್ ಬೆಟ್ಟಿಂಗ್ ಕಥೆ ಹೇಳಲು ಬಂದ ಡೈರೆಕ್ಟರ್ ಕುಮಾರ್
ಈ ಹಿಂದೆ ತಮ್ಮ ಚೊಚ್ಚಲ ಚಿತ್ರ "ಕೆಮಿಸ್ಟ್ರಿ ಆಫ್ ಕರಿಯಪ್ಪ"ಗೆ ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ಕುಮಾರ್ ಇದೀಗ ತಮ್ಮ ಮೂರನೇ ಚಿತ್ರದ ತಯಾರಿಯಲ್ಲಿದ್ದಾರೆ. "ಕ್ರಿಟಿಕಲ್ ಕೀರ್ತನೆಗಳು" ಎಂಬ ಕುತೂಹಲಕರ ಶೀರ್ಷಿಕೆಯೊಡನೆ ಅವರು ಬರುತ್ತಿದ್ದು ಈ ಚಿತ್ರ ಶೀರ್ಷಿಕೆಯೊಡನೆ ವಿಕೆಟ್ ಗಳ ಚಿತ್ರವಿದ್ದು ಅದು ತಕ್ಷಣ ಗಮನ ಸೆಳೆಯುತ್ತದೆ.