ದೇಶಕೊರೋನಾ ವೈರಸ್: ಲಾಕ್ ಡೌನ್ ನಡುವೆಯೇ ದೆಹಲಿಯಲ್ಲಿ ಭಯ ಬೀಳಿಸುವ ದೃಶ್ಯ, ತವರಿಗೆ ವಾಪಸ್ ಆಗಲು ನಿಲ್ದಾಣಕ್ಕೆ ಬಂದ ಸಾವಿರಾರು ಜನ!
ದೇಶಾದ್ಯಂತ 900ಕ್ಕೂ ಅಧಿಕ ಮಂದಿ ವೈರಸ್ ತಗುಲಿದ್ದು, ವೈರಸ್ ಪ್ರಸರಣ ತಪ್ಪಿಸಲು ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿದ್ದರೂ ಅತ್ತ ರಾಜಧಾನಿ ದೆಹಲಿಯಲ್ಲಿ ಮಾತ್ರ ಲಾಕ್ ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾವಿರಾರು ಜನರು ತಮ್ಮ ತಮ್ಮ ಊರಿಗೆ ತೆರಳಲು ಏಕಕಾಲದಲ್ಲಿ ಜಮಾಯಿಸಿದ್ದಾರೆ.