• Tag results for isolation

ಕೋವಿಡ್ ಸೋಂಕಿತರ ಹೋಮ್ ಐಸೋಲೇಷನ್ ಬಳಿಕ ನೆಗೆಟಿವ್ ವರದಿ ಕಡ್ಡಾಯವಲ್ಲ: ಗೌರವ್ ಗುಪ್ತಾ

ಕೊರೋನಾ ಸೋಂಕಿತರು ಹೋಮ್ ಐಸೋಲೇಷನ್ ಮುಗಿಸಿದ ಬಳಿಕ ಕೋವಿಡ್ ನೆಗೆಟಿವ್ ಪರೀಕ್ಷೆ ಕಡ್ಡಾಯವಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

published on : 25th January 2022

ವಿದೇಶಗಳಿಂದ ಬಂದು ಕೋವಿಡ್ ಪಾಸಿಟಿವ್ ಕಂಡುಬಂದರೆ ಐಸೊಲೋಶನ್ ಕಡ್ಡಾಯವಲ್ಲ: ಸರ್ಕಾರದ ಪರಿಷ್ಕೃತ ಮಾರ್ಗಸೂಚಿ

ಹೊರ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ನಾಳೆಯಿಂದ ಕಾರ್ಯರೂಪಕ್ಕೆ ಬರಲಿದೆ.ಉಳಿದಂತೆ ಪರಿಷ್ಕೃತ ಮಾರ್ಗಸೂಚಿ ಹಿಂದಿನ ಮಾರ್ಗಸೂಚಿಯಂತೆ ಮುಂದುವರಿಯಲಿದೆ.

published on : 21st January 2022

ಜನರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರ ಹೊಂದಿಲ್ಲ, ಹೋಂ ಐಸೊಲೇಷನ್ ನಲ್ಲಿರುವವರಿಗೆ ಕಿಟ್ ವಿತರಣೆ: ಸಚಿವ ಡಾ ಕೆ ಸುಧಾಕರ್

ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

published on : 20th January 2022

ಹೋಂ ಐಸೋಲೇಷನ್ ಅವಧಿ 10 ದಿನಗಳಿಂದ 7 ದಿನಕ್ಕೆ ಇಳಿಕೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಕೋವಿಡ್ ಸೋಂಕಿತರ ಹೋಂ ಐಸೋಲೇಷನ್ ಅವಧಿಯಲ್ಲಿ ಮೂರು ದಿನಗಳನ್ನು ಕಡಿತ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ಹೇಳಿದ್ದಾರೆ.

published on : 18th January 2022

ಫೆಬ್ರವರಿಯಲ್ಲಿ ರಾಜ್ಯದಲ್ಲಿ ಸೋಂಕು ಉತ್ತುಂಗಕ್ಕೆ: ಹೋಂ ಐಸೋಲೇಷನ್ ನಲ್ಲಿರುವವರ ಮೇಲೆ ನಿಗಾ ಹೆಚ್ಚಿಸಿದ ಅಧಿಕಾರಿಗಳು

ಫೆಬ್ರವರಿಯಲ್ಲಿ ನಿರೀಕ್ಷಿತ ಕೊರೋನಾ 3ನೇ ಅಲೆ ಉತ್ತುಂಗಕ್ಕೇರಲಿದ್ದು, ಈ ವೇಳೆ ರಾಜ್ಯದಲ್ಲಿ ಪ್ರತಿದಿನ 1.2 ಲಕ್ಷ ಕೋವಿಡ್ -19 ಪ್ರಕರಣಗಳು ಕಂಡು ಬರಲಿದೆ ಎಂದು ಅಧ್ಯಯನಗಳು ಹೇಳಿವೆ. ಈ ಪೈಕಿ ಶೇ.90-94 ಸೋಂಕಿತರು ಮನೆಯಲ್ಲಿಯೇ ಐಸೋಲೇಷನ್ ಗೊಳಗಾಗಲಿದ್ದು, ಈ ಕುರಿತು ಆರೋಗ್ಯ ಮತ್ತು ಬೃಹತ್ ಬೆಂಗಳೂರು ಮಹಾನಗರದ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

published on : 16th January 2022

ಸಿಎಂ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್: ಐಸೋಲೇಷನ್'ನಲ್ಲಿ ಆರೋಗ್ಯ ಸಚಿವ ಸುಧಾಕರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕೊರೋನಾ ಪಾಟಿಸಿವ್ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸ್ವಯಂಪ್ರೇರಿತರಾಗಿ ಐಸೋಲೇಷನ್'ಗೊಳಗಾಗಿದ್ದಾರೆ. 

published on : 12th January 2022

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋವಿಡ್-19 ಪಾಸಿಟಿವ್; ಶೌಚಾಲಯದಲ್ಲಿ 5 ತಾಸು ಐಸೊಲೇಟ್ ಆದ ಸೋಂಕಿತೆ!

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋವಿಡ್-19 ಪಾಸಿಟೀವ್ ಕಂಡುಬಂದ ಹಿನ್ನೆಲೆಯಲ್ಲಿ ಆಕೆ ಶೌಚಾಲಯದಲ್ಲೇ ಐಸೊಲೇಟ್ ಆದ ವಿಲಕ್ಷಣ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ.

published on : 31st December 2021

ಓಮಿಕ್ರಾನ್ ಆತಂಕ: ಅಂತರಾಷ್ಟ್ರೀಯ ಪ್ರಯಾಣಿಕ ಸಂಪರ್ಕಿತರಿಗೆ 7 ದಿನ ಹೋಂ ಐಸೋಲೇಷನ್!

ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಆತಂಕ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರೊಂದಿಗೆ ಸಂಪರ್ಕದಲ್ಲಿರುವವರನ್ನು 7 ದಿನ ಹೋಂ ಐಸೋಲೇಷನ್ ನಲ್ಲಿರಿಸಲು ಆರೋಗ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

published on : 25th December 2021

ಓಮಿಕ್ರಾನ್ ಸೋಂಕಿತ ವಿದೇಶಿ ಪ್ರಯಾಣಿಕರಿಗಾಗಿ ರಾಜ್ಯದಲ್ಲಿ ಪ್ರತ್ಯೇಕ ವಾರ್ಡ್‌ಗಳ ಸ್ಥಾಪನೆ: ಸಚಿವ ಸುಧಾಕರ್

ಕೊರೋನಾ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ವಿದೇಶಿ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

published on : 1st December 2021

ಕೇರಳದಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಶೈಕ್ಷಣಿಕ ಸಂಸ್ಥೆ ಹಾಗೂ ಅವರ ಕಚೇರಿಯಿಂದಲೇ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ!

ಗಡಿ ಹಂಚಿಕೊಂಡಿರುವ ಕೇರಳ, ಮಹಾರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಈ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ ಮಂದಿಯ ಬಗ್ಗೆ ಕರ್ನಾಟಕ ಹೆಚ್ಚಿನ ಎಚ್ಚರಿಕೆ ವಹಿಸಿದೆ. 

published on : 2nd September 2021

ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದವರಿಗೆ ರೂ.2 ಸಾವಿರ ಬಹುಮಾನ: ಗ್ರಾ.ಪಂ ಅಧ್ಯಕ್ಷನಿಂದ ಬಂಪರ್ ಆಫರ್‌

ಕೊರೊನಾ ಟೆಸ್ಟ್ ಮಾಡಿಸಿಕೊಂಡವರಿಗೆ ತಲಾ ಐನೂರು ರೂಪಾಯಿ ಕೊಡುವುದಾಗಿ ಹೇರೂರು ಪಂಚಾಯತ್​ ಅಧ್ಯಕ್ಷ ಘೋಷಣೆ ಮಾಡಿದ ಬೆನ್ನಲ್ಲೆ, ಇದೀಗ ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮ ಪಂಚಾಯತ್​ ಅಧ್ಯಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಲಾ 2 ಸಾವಿರ ರೂಪಾಯಿ ಇನಾಮು ಪ್ರಕಟಿಸಿದ್ದಾರೆ.

published on : 6th June 2021

ಕೋವಿಡ್-19: ಜೀವ ರಕ್ಷಕ ಸಾಧನಗಳಿವೆ ಎಂದು ಪರಿಸ್ಥಿತಿ ಗಂಭೀರವಾದರೂ ಕಣ್ಮುಚ್ಚಿ ಕೂರದಿರಿ...!

ಆಕ್ಸಿಜನ್ ಸಿಲಿಂಡರ್ ಲಭ್ಯವಾಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತರು ಹೋಂ ಐಸೋಲೇಷನ್ ನಲ್ಲಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಜೀವ ರಕ್ಷಕ ಸಾಧನಗಳನ್ನು ಇಟ್ಟುಕೊಳ್ಳುತ್ತಿರುವ ಜನರು ಇದನ್ನೇ ನಂಬಿ ಪರಿಸ್ಥಿತಿ ಗಂಭೀರವಾದರೂ ಆಸ್ಪತ್ರೆಗಳಿಗೆ ಹೋಗದೇ ಇರುವುದು ಸಾವಿನ ಸಂಖ್ಯೆ ಏರಿಕೆಯಾಗಲು ಕಾರಣವಾಗುತ್ತಿದೆ.

published on : 31st May 2021

ಕೋವಿಡ್-19 ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಗಳಿಂದ 'ಆ್ಯಂಟಿಬಾಡಿ ಕಾಕ್ಟೇಲ್' ಥೆರಪಿ ಪ್ರಾರಂಭ!

ಹೋಂ ಐಸೊಲೇಷನ್ ನಲ್ಲಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವವರು ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ (ಆಂಟಿಬಾಡಿ ಕಾಕ್ಟೈಲ್) ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು ಅದರ ಆರಂಭಕ್ಕೆ ಮುಂದಾಗಿವೆ. 

published on : 29th May 2021

ದಾವಣಗೆರೆ: ಸೋಂಕಿತರಿಗೆ ಹೋಂ ಐಸೋಲೇಷನ್‌ ಇಲ್ಲ, ಕೋವಿಡ್‌ ಕೇಂದ್ರಕ್ಕೆ ದಾಖಲಾಗುವುದು ಕಡ್ಡಾಯ- ಸುಧಾಕರ್‌

ಹೋಂ ಐಸೋಲೇಷನ್‌ಗೊಳಗಾದ ಕೋವಿಡ್‌ ಸೋಂಕಿತರಿಂದಲೇ ಇತರರಿಗೂ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೋವಿಡ್‌ ಸೋಂಕಿತರಿಗೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡುವುದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

published on : 22nd May 2021

ಕೊಳಗೇರಿ ಸೋಂಕಿತರಿಗೆ ಹೋಮ್‌ ಐಸೋಲೇಷನ್‌ ಇಲ್ಲ; ಎಲ್ಲರಿಗೂ ಕೋವಿಡ್‌ ಕೇರ್‌ನಲ್ಲೇ ಚಿಕಿತ್ಸೆ: ಡಾ. ಅಶ್ವತ್ಥ ನಾರಾಯಣ

 ರಾಜ್ಯದ ಗ್ರಾಮೀಣ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಗೇರಿಗಳಲ್ಲಿ ಕೋವಿಡ್‌ ಸೋಂಕಿತರನ್ನು ಹೋಮ್ ಐಸೋಲೇಷನ್‌ ಮಾಡದಿರಲು ನಿರ್ಧರಿಸಿರುವ ಸರಕಾರ, ಅಂಥ ಪ್ರದೇಶಗಳ ಎಲ್ಲ ಸೋಂಕಿತರನ್ನೂ ಕೋವಿಡ್‌ ಕೇರ್‌ ಕೇಂದ್ರಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. 

published on : 15th May 2021
1 2 > 

ರಾಶಿ ಭವಿಷ್ಯ