ರಾಜ್ಯಎಲ್ ಇಡಿ ಬೀದಿದೀಪ ಅಳವಡಿಕೆ: ರಾಜ್ಯಾದ್ಯಂತ ವಿಸ್ತರಣೆಗೆ ಸರ್ಕಾರ ಮುಂದು
ಎಲ್ಲವೂ ಅಂದುಕೊಂಡಂತೆ ಸಾಗಿದರೆ, ದೇಶದಲ್ಲಿಯೇ ಕರ್ನಾಟಕ ರಾಜ್ಯ ಬೀದಿ ದೀಪಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಅಳವಡಿಸಿಕೊಂಡ ರಾಜ್ಯ ಎನಿಸಿಕೊಳ್ಳಲಿದೆ. ಮುಂದಿನ ಆರು ತಿಂಗಳಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಲವು ಭಾಗಗಳು ಮತ್ತು ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಎಲ್ ಇಡಿ ಬೀದಿ ದೀಪಗಳು ಅಳವಡಿಕೆಯಾಗಲಿವೆ. ಇದರಿಂದ ವಿದ್ಯುತ್ ಬಳಕೆ ದೀರ್ಘಕಾಲದಲ