ರಾಜ್ಯ'ರೈತರ ಭೂಮಿ ಮಾರಾಟಕ್ಕಿಲ್ಲ' ಫಲಕ ಹಳ್ಳಿಗಳಲ್ಲಿ ಹಾಕಿ ರಾಜ್ಯಾದ್ಯಂತ ಸರ್ಕಾರ ವಿರುದ್ಧ ಪ್ರತಿಭಟನೆಗೆ ರೈತ ಸಂಘ ಮುಂದು
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಅಭಿಯಾನ ಆರಂಭಿಸಲು ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್) ಮುಂದಾಗಿದ್ದು ಆಗಸ್ಟ್ 8ರಿಂದ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಕೃಷಿ ಭೂಮಿ ಮಾರಾಟಕ್ಕಿಲ್ಲ ಎಂಬ ಫಲಕ ಹಾಕಲಾಗುವುದು ಎಂದು ಘೋಷಿಸಿದೆ.