ಸಿನಿಮಾ ಸುದ್ದಿ'ಕಾಂತಾರ'ದ 'ವರಾಹರೂಪಂ' ಹಾಡು ವಿವಾದ: ರಿಷಬ್ ಶೆಟ್ಟಿ ಮತ್ತು ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್
'ಕಾಂತಾರ' ಕನ್ನಡ ಸಿನೆಮಾದಲ್ಲಿ 'ವರಾಹರೂಪಂ' ಹಾಡಿನ ಕೃತಿಚೌರ್ಯ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ವಿನಾಯ್ತಿ ನೀಡಿದೆ. ಈ ಮೂಲಕ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ನಿರಾಳರಾಗಿದ್ದಾರೆ.