ಏನಿದು ಭಾರತ್ ಸ್ಟೇಜ್ 3? ದ್ವಿಚಕ್ರ ವಾಹನಗಳ ಭಾರೀ ರಿಯಾಯಿತಿ ಮಾರಾಟಕ್ಕೂ ಇದಕ್ಕೂ ಏನು ಸಂಬಂಧ?

ಭಾರತ್ ಸ್ಟೇಜ್ 3 ನಿಯಮದಡಿ ಉತ್ಪಾದನೆಯಾದ ವಾಹನಗಳ ಮಾರಾಟ ಮತ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭಾರತ್ ಸ್ಟೇಜ್ 3 ನಿಯಮದಡಿ ಉತ್ಪಾದನೆಯಾದ ವಾಹನಗಳ ಮಾರಾಟ ಮತ್ತು ದಾಖಲಾತಿ ಮಾಡಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ನಾಳೆಯಿಂದ ನಿರ್ಬಂಧ ಹೇರಿದ ನಂತರ ಭಾರತೀಯ ವಾಹನ ತಯಾರಿಕಾ ಕೈಗಾರಿಕೆ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದೆ.
ಹಾಗಾದರೆ ಈ ಬಿಎಸ್ 3 ಎಂಜಿನ್ ಗಳೆಂದರೇನು,ಅವುಗಳಿಗೆ ಇಂದು ಮಾತ್ರ ಭಾರೀ ಬೇಡಿಕೆ ಬರಲು ಕಾರಣವೇನೆಂಬುದನ್ನು ತಿಳಿದುಕೊಳ್ಳೋಣ.
1. ಬಿಎಸ್ ಅಥವಾ ಭಾರತ್ ಸ್ಟೇಜ್ ಎಂದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದ ಎಮಿಷನ್ ನಿಯಮ(ಇಂಧನ ಹೊರಸೂಸುವ ನಿಯಮ). ಬಿಎಸ್ ನಿಯಮದಡಿ ವಾಹನದಿಂದ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಇಂಧನದ ವಾಯು ಹೊರಸೂಸಬಹುದು ಎಂದು ಪ್ರಮಾಣ ನಿಗದಿಪಡಿಸಿದೆ. ಮತ್ತು ಇದನ್ನು ನಾಳೆಯಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಿದೆ.
2. 2000ನೇ ಇಸವಿಯಲ್ಲಿ ಯುರೋಪ್ ರಾಷ್ಟ್ರದಲ್ಲಿರುವ ವಾಹನಗಳಿಂದ ಹೊರಸೂಸುವ ಮಾಲಿನ್ಯ ನಿಯಮಗಳಿಗನುಗುಣವಾಗಿ ಭಾರತದಲ್ಲಿ ಕೂಡ ಭಾರತ 2000 ಗುಣಮಟ್ಟವನ್ನು ಅಳವಡಿಸಲಾಯಿತು. ಯುರೋಪ್ ನಲ್ಲಿ ಅದಕ್ಕೆ ಯುರೋ1, ಯುರೋ 2 ಇತ್ಯಾದಿಗಳನ್ನಾಗಿ ಕರೆಯುತ್ತಿದ್ದು, ಭಾರತದಲ್ಲಿ ಬಿಎಸ್-11 ನಿಯಮ 2005ರಲ್ಲಿ ಮತ್ತು ಬಿಎಸ್ 3 ಏಪ್ರಿಲ್ 1 2010ರಲ್ಲಿ ಜಾರಿಗೆ ಬಂತು.
3. ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ಈಗಾಗಲೇ ಯುರೋ6 ಜಾರಿಯಲ್ಲಿದೆ. ಆದರೆ ಭಾರತ ಇನ್ನೂ ಹಿಂದುಳಿದಿದೆ. 
4. ಭಾರತ ಬಿಎಸ್ 5 ನಿಯಮವನ್ನು ಮುರಿದು ನೇರವಾಗಿ ಬಿಎಸ್ 4ನಿಂದ ಬಿಎಸ್ 6ಕ್ಕೆ 2020ರಲ್ಲಿ ಜಾರಿಗೆ ತರುವ ಯೋಜನೆಯಲ್ಲಿದೆ. ವಾಹನ ಉತ್ಪಾದಕರು ಮತ್ತು ತೈಲ  ಕಂಪೆನಿಗಳು ಈ ಬದಲಾವಣೆಗೆ ಸಿದ್ದರಾಗುವಂತೆ ಸೂಚಿಸಲಾಗಿದೆ.
5. ಬಿಎಸ್ 3 ನಿಯಮ ಜಾರಿಗೆ ಮುನ್ನ ಇದ್ದಂತಹ ದ್ವಿಚಕ್ರ ವಾಹನಗಳನ್ನು ದೇಶದಲ್ಲಿ ನಿರ್ಬಂಧಿಸಲು ಮುಂದಾಗಿದೆ. ಬಿಎಸ್ 3 ಪ್ರಕಾರ, ಎಂಜಿನ್ ದಹನ ಸಂದರ್ಭದಲ್ಲಿ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಎಲೆಕ್ಟ್ರಾನಿಕ್ಸ್ ನಿಯಂತ್ರಣವನ್ನು ಜಾರಿಗೆ ತರಲಾಗುತ್ತದೆ.
6. ವಾಹನ ನಿಲ್ಲಿಸಿದಾಗ ಇಂಧನ ಆವಿಯಾಗುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಬಿಎಸ್ 4 ಗುಣಮಟ್ಟ ಸೂಚಿಸುತ್ತದೆ. ಹೀಗಾಗಿ ದ್ವಿಚಕ್ರ ವಾಹನ ತಯಾರಕರು ವಾಹನ ತಯಾರಿಸುವಾಗ ಇಂಧನ ಆವಿಯಾಗುವಿಕೆಯನ್ನು ನಿಯಂತ್ರಿಸುವ ಘಟಕವನ್ನು ಅಳವಡಿಸಬೇಕಾಗುತ್ತದೆ.
7. ಈ ನಿಯಮಗಳೆಲ್ಲವನ್ನೂ ಜಾರಿಗೆ ತರುವ ಉದ್ದೇಶ ಮಾಲಿನ್ಯ ನಿಯಂತ್ರಣ. ಆದರೆ ಸುಧಾರಿತ ತಂತ್ರಜ್ಞಾನ ಅಳವಡಿಸುವುದರಿಂದ ವಾಹನದ ಬೆಲೆ ಮುಂದಿನ ದಿನಗಳಲ್ಲಿ ದುಬಾರಿಯಾಗಬಹುದು.
8. ಸುಜುಕಿ, ಹುಂಡೈ, ಬಜಾಜ್ ಮೊದಲಾದ ಕಂಪೆನಿಗಳು ಈಗಾಗಲೇ ಬಿಎಸ್ 4ಗೆ ವರ್ಗಾಯಿಸಿಕೊಂಡಿದ್ದಾರೆ. ಉಳಿದ ಕಂಪೆನಿಗಳು ಸಂಶೋಧನೆ, ಅಭಿವೃದ್ಧಿ ಮತ್ತು ಬದಲಾವಣೆಯ ಹಂತದಲ್ಲಿವೆ.
9. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಿಎಸ್ 3 ವಾಹನಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಎಲ್ಲಾ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಬಿಎಸ್ 3 ಮಾರಾಟವಾಗದ ವಾಹನಗಳ ಸಂಖ್ಯೆ ಮಾರ್ಚ್ 20ರ ಹೊತ್ತಿಗೆ ಸುಮಾರು 8,24,275 ಇದ್ದವು.
10. ಬಿಎಸ್ 3 ವಾಹನಗಳು ಸಾಧ್ಯವಾದಷ್ಟು ಮಾರಾಟವಾಗಲು ಕಂಪೆನಿಗಳು ಗ್ರಾಹಕರಿಗೆ ಭಾರೀ ರಿಯಾಯಿತಿ ನೀಡುತ್ತಿದೆ. ಕೆಲವು ಕಂಪೆನಿಗಳು ವಾಹನಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸುತ್ತವೆ. ಇನ್ನು ಕೆಲವು ಕಂಪೆನಿಗಳು ಬಿಎಸ್ 3 ಗೆ ಗುಣಮಟ್ಟಕ್ಕೆ ಸಮನಾದ ವಾಹನಗಳನ್ನು ಹೊಂದಿರುವ ದೇಶಗಳಿಗೆ ರಫ್ತು ಮಾಡುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com