ಭಾರತದಲ್ಲಿ ಇನ್ನು ಮುಂದೆ ಲ್ಯಾಪ್ ಟಾಪ್ ನಿಂದಲೂ ಉಬರ್ ಬುಕ್ ಮಾಡಬಹುದು!

ಜಾಗತಿಕ ಮಟ್ಟದ ಉಬರ್ ಸಂಸ್ಥೆ ವೆಬ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇನ್ನು ಮುಂದೆ ಲ್ಯಾಪ್ ಟಾಪ್, ಕಂಪ್ಯೂಟರ್, ಟ್ಯಾಬ್ ಗಳಿಂದಲೂ ಉಬರ್ ಕಾರುಗಳನ್ನು ಬುಕ್ ಮಾಡಬಹುದಾಗಿದೆ.
ಉಬರ್
ಉಬರ್
ನವದೆಹಲಿ: ಜಾಗತಿಕ ಮಟ್ಟದ ಉಬರ್ ಸಂಸ್ಥೆ ವೆಬ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇನ್ನು ಮುಂದೆ ಲ್ಯಾಪ್ ಟಾಪ್, ಕಂಪ್ಯೂಟರ್, ಟ್ಯಾಬ್ ಗಳಿಂದಲೂ ಉಬರ್ ಕಾರುಗಳನ್ನು ಬುಕ್ ಮಾಡಬಹುದಾಗಿದೆ. 
ಸ್ಮಾರ್ಟ್ ಫೋನ್ ಬಳಕೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ, m.uber.com ಮೂಲಕ ಲ್ಯಾಪ್ ಟಾಪ್, ಟ್ಯಾಬ್, ಕಂಪ್ಯೂಟರ್ ಗಳ ಮೂಲಕ ರೈಡ್ ನ್ನು ಬುಕ್ ಮಾಡಬಹುದಾಗಿದೆ.  ಉಬರ್ ಆಪ್ ಇಲ್ಲದವರಿಗೆ ಸಂಸ್ಥೆಯ ಈ ಹೊಸ ಯೋಜನೆ ಸಹಕಾರಿಯಾಗಲಿದೆ. 
ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಮೂಲಕ ಉಬರ್ ಆಫ್ ಲೈನ್ ಸರ್ಚ್ ನ್ನೂ ಸಹ ಸಕ್ರಿಯಗೊಳಿಸಿದ್ದು ಗ್ರಾಹಕರಿಗೆ ರೈಡ್ ಲೊಕೇಶನ್ ನ್ನು ಆಪ್ ನಲ್ಲಿ ನಮೂದಿಸುವುದನ್ನು ಮತ್ತಷ್ಟು ಸುಲಭಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಮತ್ತೊಂದು ಹೊಸ ವೈಶಿಷ್ಟ್ಯವೆಂದರೆ ಉಬರ್ ಆಪ್ ಹೊಂದಿರುವ ವ್ಯಕ್ತಿ ತನಗೆ ಬೇಕಾದ ಮತ್ತೋರ್ವ ವ್ಯಕ್ತಿ ಎಲ್ಲಿಯೇ ಇದ್ದರೂ ಅವರಿಗಾಗಿ ರೈಡ್ ಬುಕ್ ಮಾಡಬಹುದಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ಸಂಸ್ಥೆ ಪುಣೆಯಲ್ಲಿ ಪರೀಕ್ಷಾರ್ಥವಾಗಿ ಮೊದಲು ಜಲರಿಗೆ ತರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com