ಬೆಂಗಳೂರು ನಗರದಲ್ಲಿರುವ ಪ್ರಸಿದ್ಧ ಶಿವನ ದೇವಾಲಯಗಳು

ಸಿಲಿಕಾನ್ ಸಿಟಿ ಬೆಂಗಳೂರು ಆಧುನಿಕ ಕಟ್ಟಡಗಳಿಂದ ತುಂಬಿಹೋಗಿದೆ. ಇದರ ನಡುವೆಯೂ ಭಕ್ತರ ಮನಸ್ಸಿಗೆ ಮುದ ನೀಡುವ ಐತಿಹಾಸಿಕ ಮಹತ್ವವಿರುವ ಅನೇಕ...
ಕೆಂಪ್ ಫೋರ್ಟ್ ನಲ್ಲಿರುವ ಶಿವ ದೇವಾಲಯ
ಕೆಂಪ್ ಫೋರ್ಟ್ ನಲ್ಲಿರುವ ಶಿವ ದೇವಾಲಯ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಆಧುನಿಕ ಕಟ್ಟಡಗಳಿಂದ ತುಂಬಿಹೋಗಿದೆ. ಇದರ ನಡುವೆಯೂ ಭಕ್ತರ ಮನಸ್ಸಿಗೆ ಮುದ ನೀಡುವ ಐತಿಹಾಸಿಕ ಮಹತ್ವವಿರುವ ಅನೇಕ ದೇವಸ್ಥಾನಗಳಿವೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಕಟ್ಟಿಕೊಂಡು ತಮ್ಮ ಆರಾಧ್ಯನನ್ನು ಪೂಜೆ ಮಾಡುತ್ತಾರೆ. ನಗರದಲ್ಲಿರುವ ಹಲವು ಸುಪ್ರಸಿದ್ದ ಶಿವನ ದೇವಾಲಯಗಳ ವಿವರ ಇಲ್ಲಿದೆ.
ಕೆಂಪ್ ಫೋರ್ಟ:
ಕೆಂಪ್ ಫೋರ್ಟ್ ನಲ್ಲಿರುವ ಶಿವನ ದೇವಾಲಯ ಮತ್ತೊಂದು ಪ್ರಮುಖ ದೇಗುಲವಾಗಿದೆ,  ಇಲ್ಲಿ 65 ಅಡಿ ಎತ್ತರವಿರುವ ಶಿವನ ವಿಗ್ರಹವಿದೆ, ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರುವ ಈ ದೇವಾಲಯದಲ್ಲಿ ಅತಿ ದೊಡ್ಡ ಗಣೇಶನ ವಿಗ್ರಹ ಕೂಡ ಇದೆ, ಶಿವ ಕೈಲಾಸದಲ್ಲಿರುವಂತೆ ಇಲ್ಲಿನ ವಿಗ್ರಹವನ್ನು ನೀರುಕೊಳದ ಮೇಲೆ ಪ್ರತಿಷ್ಠಾಪಿಸಲಾಗಿದೆ, ಬಿಳಿಯ ಮಾರ್ಬಲ್ ನಿಂದ ಈ ವಿಗ್ರಹ ಕೆತ್ತಲಾಗಿದೆ.
ಕಾಡು ಮಲ್ಲೇಶ್ವರ:
ಮಲ್ಲೇಶ್ವರದಲ್ಲಿರುವ ಪ್ರಮುಖ ಶಿವನ ದೇವಾಲಯ ಕಾಡು ಮಲ್ಲೇಶ್ವರ 17ನೇ ಶತಮಾನದಲ್ಲಿ ನಿರ್ಮಿತವಾಗಿರುವ ಈ ದೇವಾಲಯ ಶಿವನಿಗಾಗಿ ಅರ್ಪಿತವಾಗಿದೆ,  ಇದರ ಪಕ್ಕದಲ್ಲೇ ಮತ್ತೊಂದು ಪ್ರಮುಖ ಆಕರ್ಷಣೀಯ ಸ್ಥಳವಿದೆ, ಅದೇ ನಂದಿ ತೀರ್ಥ, ಇಲ್ಲಿ ನಂದಿಯ ಬಾಯಿಂದ ಬರುವ ನೀರು ಸತತವಾಗಿ ಹರಿದು ಬಂದು ಶಿವಲಿಂಗದ ಮೇಲೆ ಬೀಳುತ್ತದೆ. ಈ ನೀರು  ವೃಷಬಾವತಿ ನದಿಯಿಂದ ಬರುತ್ತದೆ ಎಂಬ ನಂಬಿಕೆಯಿದೆ.
ಗವಿ ಗಂಗಾಧರೇಶ್ವರ:
ಬೆಂಗಳೂರಿನ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯ ಕೆಲವೇ ಕೆಲವು ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದು.  ಬೃಹತ್ ಬಂಡೆಯೊಂದನ್ನು ಕೊರೆದು ಈ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಪ್ರತಿವರ್ಷ 'ಮಕರ ಸಂಕ್ರಾತಿಯ ದಿನ' ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಭಕ್ತರು ಬಹಳ ದೂರ ಪ್ರದೇಶಗಳಿಂದ ಬರುತ್ತಾರೆ. 
ಹಲಸೂರು ಸೋಮೇಶ್ವರ:


ಮತ್ತೊಂದು ಪ್ರಸಿದ್ದ ದೇವಾಲಯ ಹಲಸೂರು ಸೋಮೇಶ್ವರ, ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಈ ದೇಗುಲ ನಗರದಲ್ಲಿರುವ ಅತಿ ಪುರಾತನ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಚೌಕಾಕಾರದ ಕಲ್ಯಾಣಿಯಿದೆ. ಇದು 1,250 ವರ್ಷ ಹಳೇಯದ್ದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com