ಮಾರುತಿ ಸುಜುಕಿಯ ಹೊಸ ಸೆಲೆರಿಯೊ ಮಾರುಕಟ್ಟೆಗೆ ಬಿಡುಗಡೆ, ಬೆಲೆ ರೂ. 4.99 ಲಕ್ಷ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಲೆರಿಯೊದ ಹೊಸ ಆವೃತ್ತಿಯನ್ನು ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಸೆಲೆರಿಯೊ
ಹೊಸ ಸೆಲೆರಿಯೊ

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಲೆರಿಯೊದ ಹೊಸ ಆವೃತ್ತಿಯನ್ನು ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ಸೆಲೆರಿಯೊ ಕಾರಿನ ಬೆಲೆ 4.99 ಲಕ್ಷ ರೂ. ನಿಂದ ರೂ 6.94 ಲಕ್ಷ ರೂ.(ಎಕ್ಸ್ ಶೋ ರೂಂ ದೆಹಲಿ). ಮ್ಯಾನುವಲ್ ಕಾರಿನ ಬೆಲೆ 4.99 ಲಕ್ಷ  ರೂ ನಿಂದ 6.44 ಲಕ್ಷ ರೂ. ವರೆಗೆ ಇದ್ದರೆ, ಎಜಿಎಸ್ (ಆಟೋ ಗೇರ್ ಶಿಫ್ಟ್) ಕಾರಿನ ಬೆಲೆ 6.13 ಲಕ್ಷ ರೂ. ನಿಂದ 6.94 ಲಕ್ಷ ರೂ. ಇದೆ.

ಹೊಸ ಸೆಲೆರಿಯೊ ಕಾರು ಖರೀದಿಗೆ ಮಾರುತಿ ಸುಜುಕಿ ಕಂಪನಿಯು ಈಗಾಗಲೇ ರೂ. 11 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಹೊಸ ಕಾರು ಪೆಟ್ರೋಲ್ ಮಾದರಿಗಳಲ್ಲಿಯೇ ಅತಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಈ ಬಾರಿ ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬಲೆನೊ ಮಾದರಿಗಳ ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತಿರುವ ಹಾರ್ಟ್ಟೆಕ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಹೊಸ ಸೆಲೆರಿಯೊ ಅಭಿವೃದ್ದಿಗೊಂಡಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ನಿಂದಾಗಿ ಸೆಲೆರಿಯೊ ಕಾರು ಈ ಹಿಂದಿನ ಮಾದರಿಗಿಂತಲೂ ತುಸು ಹೆಚ್ಚುವರಿ ಸ್ಥಳಾವಕಾಶ ಹೊಂದಿದೆ.

ಭಾರತವು ಈಗ ಜಾಗತಿಕವಾಗಿ ಐದನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ ಮತ್ತು ಮಾರುತಿ ಸುಜುಕಿ ಇದರ ಅರ್ಧದಷ್ಟು ಕೊಡುಗೆ ನೀಡಲು ಹೆಮ್ಮೆಪಡುತ್ತಿದೆ. ಭಾರತವನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ. ನಾವು ಭಾರತೀಯ ಮಾರುಕಟ್ಟೆ ಮತ್ತಷ್ಟು ಬೆಳೆಯಬೇಕಾದರೆ ನಾವು ವಿಶೇಷ ಗಮನ ಹರಿಸಬೇಕು” ಎಂದು ಎಂಎಸ್‌ಐ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆನಿಚಿ ಆಯುಕಾವಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com