ವಿಡಿಯೋ
ಕೊಪ್ಪಳ ಜಿಲ್ಲೆಯ ಗಂಗಾವತಿ ಠಾಣೆ ವ್ಯಾಪ್ತಿಯ ಅಯೋಧ್ಯಾ ಗ್ರಾಮದಲ್ಲಿ, 18 ವರ್ಷದ ಯುವಕನೊಬ್ಬ ತನ್ನ ಕುಟುಂಬದ ಸದಸ್ಯರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಶ್ರೀ ವಿದ್ಯಾನಿಕೇತನ ಶಾಲೆಯಲ್ಲಿ ಆಹಾರ ಮೇಲ್ವಿಚಾರಕರಾಗಿದ್ದ ವೆಂಕಟ ನಾಯ್ಡು ಮತ್ತು ಅವರ ಮಗಳು 19 ವರ್ಷದ ಕಾಲೇಜು ವಿದ್ಯಾರ್ಥಿನಿ ಪ್ರಗತಿ ಮೃತಪಟ್ಟಿದ್ದಾರೆ.
ಅವರ ಪತ್ನಿ ಸೌಜನ್ಯ ಮತ್ತು ಆರೋಪಿ ಪುತ್ರ ಗಾಯಗೊಂಡಿದ್ದಾರೆ. ಆರೋಪಿಯನ್ನು ಸಾಯಿ ವೆಂಕಟ್ ಮನ್‌ದೀಪ್ (18) ಎಂದು ಗುರುತಿಸಲಾಗಿದೆ.
ಈತ ಕಳೆದ ಒಂದು ವರ್ಷದಿಂದ ಮೊಬೈಲ್‌ನಲ್ಲಿ ಆನ್‌ಲೈನ್ ಬೆಟ್ಟಿಂಗ್ ಆಡುತ್ತಾ ಸುಮಾರು 15 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದ ಎನ್ನಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement