ವಿಡಿಯೋ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ವಿಟೋ ಹಕ್ಕು ಇಲ್ಲದ ಖಾಯಂ ಸದಸ್ಯರ ಹೊಸ ವರ್ಗವನ್ನು ಸೃಷ್ಟಿಸುವುದನ್ನು ಭಾರತ ತೀವ್ರವಾಗಿ ಆಕ್ಷೇಪಿಸಿದೆ..
ಇದರಿಂದ, ಹೊಸದಾಗಿ ಸೇರ್ಪಡೆಯಾಗುವ ದೇಶಗಳನ್ನು 'ಎರಡನೇ ದರ್ಜೆ'ಗೆ ತಳ್ಳಿದಂತೆ ಎಂದು ಭಾರತ ಹೇಳಿದೆ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಭಾಗವಾಗಿ ಸೋಮವಾರ ವಿಟೋ ಅಧಿಕಾರದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ಈ ವೇಳೆ, ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಹರೀಶ್ ಪರ್ವತನೇನಿ ಮಾತನಾಡಿದರು.
ವಿಟೋ ಅಧಿಕಾರವಿಲ್ಲದ ಹೊಸ ವರ್ಗವನ್ನು ಸೃಷ್ಟಿಸಿದರೆ, ಅವರು ‘ಎರಡನೇ ದರ್ಜೆಯ’ ಸದಸ್ಯರಾಗಿಯೇ ಉಳಿಯಲಿದ್ದಾರೆ.
ಇದರಿಂದ ಈಗಿರುವ ಐವರು ಖಾಯಂ ಸದಸ್ಯರ ಪ್ರಾಬಲ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹರೀಶ್ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.