ವಿಡಿಯೋ
ಕೇರಳದ ಮಲಪ್ಪುರಂನ ನಿಲಂಬೂರ್ ಬಳಿಯ ಪೂಕ್ಕೊಟ್ಟುಂಪದಂನ ಟಿಕೆ ಕಾಲೋನಿಯ ಕೊಟ್ಟಪುಳ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಸಿಲುಕಿ ಐವರು ಮೃತಪಟ್ಟಿದ್ದಾರೆ.
ನಾಪತ್ತೆಯಾಗಿರುವ ಮಹಿಳೆಯೊಬ್ಬರಿಗಾಗಿ ಸೋಮವಾರವೂ ಶೋಧ ಕಾರ್ಯ ಮುಂದುವರಿದಿದೆ. ವಿಡಿಯೋ ಇಲ್ಲಿದೆ ನೋಡಿ.
ಮೃತರನ್ನು ಕೊಟ್ಟಕ್ಕಲ್‌ನ ಎಡರಿಕೋಡ್ ಪಟ್ಟಣದ ನಿವಾಸಿ ಹಾಗೂ 'ಮಂಗಡನ್ ಬಸ್' ಮಾಲೀಕ ಅನಸ್ ಮಂಗಡನ್ (31), ತಿರೂರ್‌ನ ಮುಹಮ್ಮದ್‌ಕುಟ್ಟಿ (65), ಕರುವಾರಕುಂಡುವಿನ ತಾರಿಶ್‌ನ ಶ್ರಂಬಿಕ್ಕಲ್ ರಹೀಮ್ (35), ವಂದೂರಿನ ಕೊಟ್ಟಕ್ಕುನ್ನುವಿನ ಸಜ್ಜದ್ (23) ಮತ್ತು ವಂದೂರಿನ ಚೆಟ್ಟಿಯಾರಮ್ಮಲ್‌ನ ಕರುಪ್ಪತ್ ರಫೀಕ್ (41) ಎಂದು ಗುರುತಿಸಲಾಗಿದೆ.
ಮೃತಪಟ್ಟವರೆಲ್ಲರೂ ಪ್ರವಾಸಿಗರಾಗಿದ್ದು, ರಜಾದಿನವಾದ ಭಾನುವಾರದಂದು ನದಿಯ ದಡದಲ್ಲಿ ಸೇರಿದ್ದರು. ವಿಡಿಯೋ ಇಲ್ಲಿದೆ ನೋಡಿ.