ಮನರಂಜನೆ
ದಿವಂಗತ ಬಾಲಮುರಳಿಕೃಷ್ಣ ಹಾಡಿದ ನಿತ್ಯಹಸಿರಿನ 'ಮುತ್ತಿನ ಹಾರ' ಹಾಡು
ಖ್ಯಾತ ಕರ್ನಾಟಕ ಸಂಗೀತ ಗಾಯಕ ಡಾ. ಎಂ ಬಾಲಮುರಳಿಕೃಷ್ಣ ನಮ್ಮನ್ನಗಲಿದ್ದಾರೆ. ಅವರು ಕನ್ನಡ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆಯು ಅಪಾರ. ಸಂಧ್ಯಾರಾಗ, ಹಂಸಗೀತೆ ಮುಂತಾದ ಸಂಗೀತ ಪ್ರಧಾನ ಚಿತ್ರಗಳಿಗೆ ಜೀವ ತುಂಬಿದವರು ಅವರು. ಅವರು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಮುತ್ತಿನ ಹಾರ' ಸಿನಿಮಾಗಾಗಿ ಹಾಡಿದ ಈ ಹಾಡು ಕನ್ನಡಿಗರ ಮನಸ್ಸಿನಲ್ಲಿ ನಿತ್ಯ ಹಸಿರಾಗಿ ಉಳಿದಿದೆ.
