ಮನರಂಜನೆ
ಲೂಸ್ ಮಾದ ಯೋಗಿ ಅಭಿನಯದ ದುನಿಯಾ-2 ಟೀಸರ್ ಬಿಡುಗಡೆ
ದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲೂಸ್ ಮಾದ ಯೋಗಿ ಇದೀಗ ದುನಿಯಾ-2 ಚಿತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಯೋಗಿಯ ಗೆಟಪ್ ಹೇಗಿರಲಿದೆ ಎಂಬುದರ ಒಂದು ಝಲಕ್ ಇದೆ. ಚಿತ್ರವನ್ನು ಹರಿ ಎಂಬುವರು ನಿರ್ದೇಶಿಸುತ್ತಿದ್ದಾರೆ. ಯೋಗಿಗೆ ನಾಯಕಿಯಾಗಿ ಹಿತಾ ಚಂದ್ರಶೇಖರ್ ಸಾಥ್ ನೀಡಲಿದ್ದಾರೆ.
