ಸುದ್ದಿ
ಚಿಲ್ಲಿ ಸಾಸ್‌ನಲ್ಲಿ ಸ್ನಾನ ಮಾಡಿ ಉರಿಗೆ ಕಿರುಚಾಡಿದ ಭೂಪ
ಚಾಕೋಲೇಟ್ ಹಾಗೂ ಬಿಯರ್ ನಲ್ಲಿ ಸ್ನಾನ ಮಾಡಿ ಸೈ ಎನಿಸಿಕೊಂಡಿದ್ದ ಕೆಮ್ರೆ ಕ್ಯಾಂಡರ್ ಎಂಬಾತ ಇದೀಗ 1250 ಬಾಟಲ್ ಚಿಲ್ಲಿ ಸಾಸ್ ಅನ್ನು ಬಾತ್ ಟಬ್ ಗೆ ಹಾಕಿ ಸ್ನಾನ ಮಾಡಲು ಹೋಗಿ ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಚಿಲ್ಲಿ ಸಾಸ್ ತುಂಬಿದ್ದ ಬಾತ್ ಟಬ್ ಗೆ ಇಳಿಯುತ್ತಿದ್ದಂತೆ ಆತನಿಗೆ ಉರಿ ಕಾಣಿಸಿಕೊಂಡಿದೆ. ನಂತರ ಸಂಪೂರ್ಣವಾಗಿ ಮುಳುಗಿದಾಗ ಮೆಣಸಿನ ಘಾಟು ಮೂಗು ಹಾಗೂ ಕಣ್ಣಿಗೆ ನುಗ್ಗಿ ಕಿರುಚಾಡಿಕೊಂಡಿದ್ದಾನೆ. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ.
