ಸುದ್ದಿ
ಹಿಮ್ಮುಖವಾಗಿ ಚಲಿಸುತ್ತಿದ್ದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದರು ಹೆಲ್ಮೆಟ್‌ನಿಂದ ಸವಾರ ಪಾರು
ಕೇರಳದ ಕಣ್ಣೂರು ಬಳಿ ಲಾರಿಯೊಂದು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಹೆಲ್ಮೆಟ್ ನಿಂದಾಗಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಡಿಕ್ಕಿಯಾಗಿ ಸವಾರ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಲಾರಿ ಚಾಲಕ ಲಾರಿಯಿಂದ ಕೆಳಗಿಳಿದಿದ್ದಾನೆ. ಆದರೆ ಲಾರಿ ನಿಲ್ಲದೇ ಹಾಗೇ ಹಿಂದಕ್ಕೆ ಚಲಿಸಿದ್ದರಿಂದ ಮತ್ತೆ ಲಾರಿ ಏರುತ್ತಾನೆ. ಲಾರಿ ಚಾಲಕನ ನಿಯಂತ್ರಣಕ್ಕೆ ಬಾರದೆ ಚರಂಡಿಗೆ ಸಿಲುಕುತ್ತದೆ. ನಂತರ ಚಾಲಕ ಬೈಕ್ ಸವಾರನ ರಕ್ಷಣೆಗೆ ದಾವಿಸುತ್ತಾನೆ.
