ಸುದ್ದಿ
ಸತ್ತ ತಾಯಿ ಆನೆಯನ್ನು ಏಳಿಸುತ್ತಿರುವ ಮರಿ ಆನೆಯ ಹೃದಯ ವಿದ್ರಾವಕ ದೃಶ್ಯ
ಸುಮಾರು 25 ವರ್ಷದ ತಾಯಿ ಆನೆ ಆಕಸ್ಮಿಕವಾಗಿ ಕೆಳಕ್ಕ ಬಿದ್ದು ಸಾವನ್ನಪ್ಪಿದ್ದು, 2 ವರ್ಷದ ಮರಿ ಆನೆ ತನ್ನ ತಾಯಿಯನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಕೊಯಮತ್ತೂರಿನ ಪಲ್ಲಂ ನಲ್ಲಿ ನಡೆದಿದೆ. ಕಾವಾಡಿಯಮ್ಮನ್ ದೇಗುಲದ ಬಳಿ ಆಹಾರವನ್ನರಿಸಿ ಬಂದಿದ್ದ ತಾಯಿ ಆನೆ ಆಯ ತಪ್ಪಿ ಕಂದಕ್ಕೆ ಉರುಳಿ ಸಾವನ್ನಪ್ಪಿದ್ದು, ಅಲ್ಲೇ ಇದ್ದ ಮರಿ ಆನೆ ತಾಯಿಯನ್ನು ಎಬ್ಬಿಸಲು ಹರಸಾಹಸ ಪಟ್ಟಿದೆ. ಈ ದೃಶ್ಯಾವಳಿಯನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
