ಸುದ್ದಿ
76 ವರ್ಷದ ಮಹಿಳೆಯಿಂದ ಅದ್ಭುತ ಸಮರ ಕಲೆ ಪ್ರದರ್ಶನ: ವಿಡಿಯೋ ವೈರಲ್
ಇಳಿ ವಯಸ್ಸಿನಲ್ಲಿ ನಡೆದಾಡುವುದೇ ಕಷ್ಟಕರ. ಅಂತಹುದರಲ್ಲಿ 76 ವರ್ಷದ ಮಹಿಳೆಯೊಬ್ಬರು ಅದ್ಭುತವಾಗಿ ಪ್ರಾಚೀನ ಭಾರತೀಯ ಕದನ ಕಲೆ ಕಲರಿಪಯಟ್ಟುವನ್ನು ಪ್ರದರ್ಶಿಸುತ್ತಾರೆ. ಕಲರಿಪಯಟ್ಟು ಶಿಕ್ಷಕಿಯಾಗಿರುವ ಕೇರಳದ ವಟಕರ ಮೂಲದ ಮೀನಾಕ್ಷಿಯಮ್ಮ ಅವರು ತನ್ನ ಪ್ರತಿಭಾಪೂರ್ಣವಾಗಿ ಪ್ರತಿಸ್ಪರ್ಧಿ ನಿಭಾಯಿಸಲು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಎರಡೂ ತಂತ್ರಗಳನ್ನು ಬಳಸುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
