ಕ್ರೀಡೆ
ಚಿನ್ನ ಗೆದ್ದ ಖುಷಿಯಲ್ಲಿ ಕೋಚ್‌ರನ್ನೇ ಕೆಡವಿದ ಜಪಾನ್ ಕುಸ್ತಿಪಟು
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ಮಹಿಳೆಯರ ವಿಭಾಗದ ಕುಸ್ತಿ ಪಂದ್ಯದಲ್ಲಿ ಚಿನ್ನ ಗೆದ್ದ ಜಪಾನ್ ನ ಕುಸ್ತಿಪಟು ರಿಸಾಕೋ ಕವಾಯಿ ಖುಷಿಯಲ್ಲಿ ತಮ್ಮ ಕೋಚ್ ಕುಜುಹಿಟೋ ಸಾಕೆ ಅವರನ್ನು ಕುಸ್ತಿ ಅಂಗಳದಲ್ಲಿ ಕುಸ್ತಿ ತಂತ್ರದಿಂದಲೇ ಕೆಡವಿ ಬಿಟ್ಟರು. ಒಂದು ಕ್ಷಣಕ್ಕೆ ಅಚ್ಚರಿ ಅನುಭವಿಸಿದ ಕೋಚ್ ಮತ್ತೆ ಎದ್ದು ನಿಲ್ಲುತ್ತಿದ್ದಂತೆ ಮತ್ತೋಮ್ಮೆ ಅವರನ್ನು ಕೆಡವಿ ಕುಸ್ತಿಯ ಗೆಲುವನ್ನು ಆಚರಿಸಿದರು.
