ನಿಜ ಹೇಳುಬೇಕು ಎಂದರೆ ಭಾರತಕ್ಕೆ ನೆರವು ನೀಡಲೇಬೇಕು ಎಂಬ ಒತ್ತಾಯ ಇಸ್ರೇಲ್ ಮೇಲಿರಲಿಲ್ಲ. ಮತ್ತೊಂದು ಅಂಶವೆಂದರೆ ಅಂದಿನ ಕಾಲಕ್ಕೆ ವಿಶ್ವದ ಬಲಾಢ್ಯ ರಾಷ್ಟ್ರಗಳು ಎಂದೆನಿಸಿಕೊಂಡಿದ್ದ ಎರಡು ದೇಶಗಳು (ಅಮೆರಿಕ ಸೇರಿದಂತೆ) ಭಾರತಕ್ಕೆ ನೆರವು ನೀಡದಂತೆ ಮತ್ತು ಕಾದುನೋಡುವ ತಂತ್ರ ಅನುಸರಿಸುವಂತೆ ಇಸ್ರೇಲ್ ಗೆ ಸಲಹೆ ನೀಡಿದ್ದವಂತೆ. ಆದರೆ ಆ ಬಲಾಢ್ಯ ರಾಷ್ಟ್ರಗಳ ಮಾತಿನ ಹೊರತಾಗಿಯೂ ಇಸ್ರೇಲ್ ಭಾರತಕ್ಕೆ ನೇರವಾಗಿಯೇ ಸಹಾಯ ಹಸ್ತ ಚಾಚಿತ್ತು. ಇಸ್ರೇಲ್ ನ ಈ ನಡೆ ಅಮೆರಿಕ, ಚೀನಾ ಸೇರಿದಂತೆ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿತ್ತಾದರೂ, ಇಸ್ರೇಲ್ ಮಾತ್ರ ತನ್ನ ನಿಲುವಿನಿಂದ ಹಿಂದೆ ಸರಿಯಲೇ ಇಲ್ಲ.