ಎನ್ಎಸ್ಎ ಮಟ್ಟದ ಮಾತುಕತೆಗೂ ಮುನ್ನ ಜಮ್ಮುಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರನ್ನು ಪಾಕ್ ಹೈಕಮೀಷನ್ ಮಾತುಕತೆಗೆ ಆಹ್ವಾನಿಸಿತ್ತು. ಆದರೆ ಭಾರತ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಪಾಕಿಸ್ತಾನ ಪ್ರತ್ಯೇಕತಾವಾದಿ ಮುಖಂಡರ ಜೊತೆ ಮಾತುಕತೆ ನಡೆಸಿಯೇ ಸಿದ್ಧ ಎಂದು ತಿರುಗೇಟು ನೀಡಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಲಹೆಗಾರ ಮಟ್ಟದ ಮಾತುಕತೆ ಅಂತಿಮ ಕ್ಷಣದಲ್ಲಿ ರದ್ದಾಗಿತ್ತು.