ಅಪಘಾತ: 38 ಯುವತಿಯರ ಸಾವು

ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ಗಡಿಗೆ ಹೊಂದಿಕೊಂಡ ಸ್ವಾಜಿಲ್ಯಾಂಡ್‍ನ ಸಾಂಪ್ರದಾಯಿಕ ಉತ್ಸವಕ್ಕೆ ಹೊರಟಿದ್ದ ನಾಗರಿಕರು ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿ 38 ಮಂದಿ ಯುವತಿ ಯರು ಹಾಗೂ ಒಬ್ಬ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದವರ ದೇಹ ಸಾಗಿಸುತ್ತಿರುವ ವಾಹನ
ಅಪಘಾತದಲ್ಲಿ ಸಾವನ್ನಪ್ಪಿದವರ ದೇಹ ಸಾಗಿಸುತ್ತಿರುವ ವಾಹನ
Updated on: 

ಜೊಹಾನ್ಸ್‍ಬರ್ಗ್: ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ಗಡಿಗೆ ಹೊಂದಿಕೊಂಡ ಸ್ವಾಜಿಲ್ಯಾಂಡ್‍ನ ಸಾಂಪ್ರದಾಯಿಕ ಉತ್ಸವಕ್ಕೆ ಹೊರಟಿದ್ದ ನಾಗರಿಕರು ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿ 38 ಮಂದಿ ಯುವತಿ ಯರು ಹಾಗೂ ಒಬ್ಬ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾರೆ.

ಸುಮಾರು 50ಕ್ಕೂ ಹೆಚ್ಚು ಮಂದಿ ತೆರೆದ ಟ್ರಕ್‍ನ ಹಿಂಭಾಗದಲ್ಲಿ ಕೂತು ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಅಲ್ಲಿನ ರಾಜಮನೆತನದಲ್ಲಿ ನಡೆವ ಉತ್ಸವದಲ್ಲಿ ಭಾಗಿಯಾಗಲು ಹೊರಟ್ಟಿದ್ದರು ಎಂದು ಅಲ್ಲಿನ ಬಲಪಂಥೀಯ ಸಂಘಟನೆ ಹೇಳಿದೆ. ಆದರೆ, ಪೊಲೀಸರು ಘಟನೆ ಬಗ್ಗೆ ವಿವರ ನೀಡಿಲ್ಲ. ಸ್ವಾಜಿಲ್ಯಾಂಡ್ನಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ನೂರಾರು ಮಹಿಳೆಯರು ಅರೆಬೆತ್ತಲ ನೃತ್ಯ ಮಾಡುವುದು ರಾಜಮನೆತನದ ಸಾಂಪ್ರದಾಯಿಕ ಆಚರಣೆಯಾಗಿ ರೂಢಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com