ಇಸೀಸ್ ಉಗ್ರ ಸಂಘಟನೆ ಬಗ್ಗೆ ದಶಕಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ಬಲ್ಗೇರಿಯನ್ ಬಾಬಾ!

ವಿಶ್ವಕ್ಕೆ ಮಾರಕವಾಗಿರುವ ಇಸೀಸ್ ಉಗ್ರ ಸಂಘಟನೆ ಬಗ್ಗೆ ದಶಕದ ಹಿಂದೆಯೇ ಎಚ್ಚರಿಕೆ ನೀಡಿದ್ದರಂತೆ ಬಲ್ಗೇರಿಯನ್ ನ ಈ ಅಂಧ ಬಾಬಾ.
ಬಾಬಾ ವಾಂಗ
ಬಾಬಾ ವಾಂಗ
Updated on

ಬಲ್ಗೇರಿಯಾ: ಬಲ್ಗೇರಿಯನ್ ನಲ್ಲಿರುವ ಬಾಬ ಒಬ್ಬರು ವಿಶೇಷ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ವಿಶ್ವಕ್ಕೆ ಮಾರಕವಾಗಿರುವ ಇಸೀಸ್ ಉಗ್ರ ಸಂಘಟನೆ ಬಗ್ಗೆ ದಶಕದ ಹಿಂದೆಯೇ ಎಚ್ಚರಿಕೆ ನೀಡಿದ್ದರಂತೆ ಬಲ್ಗೇರಿಯನ್ ನ ಈ ಅಂಧ ಬಾಬಾ.
ಗ್ರೇಟ್ ಮುಸ್ಲಿಂ ವಾರ್ ನಲ್ಲಿ ಮುಸ್ಲಿಮರು ಯುರೋಪ್ ಮೇಲೆ ದಾಳಿ ಮಾಡಲಿದ್ದು 2043 ರ ವೇಳೆಗೆ ರೋಮ್ ಅಧಿಕೇಂದ್ರದ ಇಸ್ಲಾಮಿಕ್ ಖಲೀಫರ ಸಾಮ್ರಾಜ್ಯದ ಸ್ಥಾಪನೆ ಮೂಲಕ ಈ ದಾಳಿ ಅಂತ್ಯಗೊಳ್ಳಲಿದೆ ಎಂದು ಬಾಬಾ ವಾಂಗ ಒಂದು ದಶಕದ ಹಿಂದೆಯೇ ಎಚ್ಚರಿಕೆ ನೀಡಿದ್ದರಂತೆ.
ಬಾಬಾ ಭವಿಷ್ಯವಾಣಿ ನಿಜವಾಗುವ ಸೂಚನೆಯಂತೆ ಇಸೀಸ್ ಉಗ್ರ ಸಂಘಟನೆ ತಲೆ ಎತ್ತಿದ್ದು, ತನ್ನದೇ ಸಾಮ್ರಾಜ್ಯ ನಿರ್ಮಿಸಲು ಯತ್ನಿಸುತ್ತಿದೆ. ಬಾಬಾ ವಾಂಗ 12  ವರ್ಷದ ವರೆಗೆ ಸಾಮಾನ್ಯರಂತೆಯೇ ಜೀವನ ನಡೆಸಿದ್ದರು. ಸ್ಥಳೀಯರು ಹೇಳುವ ಪ್ರಕಾರ ಭೀಕರ ಚಂಡಮಾರುತದ ವೇಳೆ ಆಕೆ ದೃಷ್ಟಿ ಕಳೆದುಕೊಂಡರಂತೆ. ಕೆಲವು ದಿನ ನಾಪತ್ತೆಯಾಗಿ ವಾಪಸ್ಸಾದ ಬಳಿಕ ಆಕೆ ದೃಷ್ಟಿ ಕಳೆದುಕೊಂಡಿರುವುದನ್ನು ಕುಟುಂಬ ಸದಸ್ಯರು ಗಮನಿಸಿದ್ದಾರೆ.
ನಾಪತ್ತೆಯಾದ ಪ್ರಾರಂಭದ ದಿನಗಳಲ್ಲಿ ಭವಿಷ್ಯ ಗೋಚರವಾಗಲು ಪ್ರಾರಂಭವಾಯಿತು ಎಂದು ಬಾಬ ವಾಂಗ ಹೇಳಿದ್ದಾರೆ. ವಿಶೇಷವೆಂದರೆ ಎರಡನೇ ಮಹಾಯುದ್ಧದ ವೇಳೆ ಬಲ್ಗೇರಿಯಾದ ತ್ಸಾರ್ ಬೋರಿಸ್-3 ಸಹ ಈಕೆಯನ್ನು ಭೇಟಿ ಮಾಡಿದ್ದರಂತೆ. ತದನಂತರ ಬಾಬಾ ವಾಂಗಾ ಅವರು ಬಲ್ಗೇರಿಯಾದ ಕಮ್ಯುನಿಸ್ಟ್ ಪಕ್ಷದ ನಾಯಕರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com