ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಗುರುದ್ವಾರ ಧ್ವಂಸ

ಕ್ಯಾಲಿಫೋರ್ನಿಯಾ ನಲ್ಲಿ ಉಗ್ರರ ದಾಳಿ ನಂತರ ಅಮೆರಿಕದಲ್ಲಿ ಗುರುದ್ವಾರವನ್ನು ಧ್ವಂಸಗೊಳಿಸಲಾಗಿದ್ದು, ಐಸಿಸ್ ವಿರುದ್ಧ ಘೋಷಣೆಗಳನ್ನು ಗೀಚಲಾಗಿದೆ.
.ಗುರುದ್ವಾರ(ಸಾಂದರ್ಭಿಕ ಚಿತ್ರ)
.ಗುರುದ್ವಾರ(ಸಾಂದರ್ಭಿಕ ಚಿತ್ರ)
Updated on: 

ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾ ನಲ್ಲಿ ಉಗ್ರರ ದಾಳಿ ನಂತರ ಅಮೆರಿಕದಲ್ಲಿ ಗುರುದ್ವಾರವನ್ನು ಧ್ವಂಸಗೊಳಿಸಲಾಗಿದ್ದು, ಇಸೀಸ್ ಉಗ್ರ ಸಂಘಟನೆ ವಿರುದ್ಧ ಘೋಷಣೆಗಳನ್ನು ಗೀಚಲಾಗಿದೆ.

ಲಾಸ್ ಏಂಜಲೀಸ್ ನಗರದಲ್ಲಿರುವ ಗುರುದ್ವಾರ ಹಾಗೂ ಪಾರ್ಕಿಂಗ್ ಸ್ಥಳದಲ್ಲಿದ್ದ ಟ್ರಕ್ ನ್ನು ಧ್ವಂಸಗೊಳಿಸಿರುವ ಘಟನೆ ಬಗ್ಗೆ ಗುರುದ್ವಾರ ಸಿಂಗ್ ಸಭಾದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದು, "ನಮ್ಮ ಸಮುದಾಯದ ಭದ್ರತೆ ಹಾಗೂ ಸುರಕ್ಷತೆಯಾ ಬಗ್ಗೆ ಆತಂಕ ಎದುರಾಗಿದೆ" ಎಂದು ಹಾನಿಗೊಳಗಾಗಿರುವ ಗುರುದ್ವಾರದ ಅಧ್ಯಕ್ಷ ಇಂದ್ರಜಿತ್ ಸಿಂಗ್ ಹೇಳಿದ್ದಾರೆ.

ಘಟನೆ ಬಗ್ಗೆ ಬ್ಯೂನಾ ಪಾರ್ಕ್ ಪೊಲೀಸರಿಗೆ ದೂರು ನೀಡಲಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾನಿಗೊಳಗಾಗಿರುವ ಗುರುದ್ವಾರಕ್ಕೆ ಪ್ರತಿ ವಾರ 800 ಮಂದಿ ಸಿಕ್ಖರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com