ಭಾರತಕ್ಕೆ ಬೆದರಿಕೆ ಒಡ್ಡುತ್ತಿರುವ ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳುತ್ತಿಲ್ಲ: ಅಮೆರಿಕಾ ಆರೋಪ

ಭಾರತಕ್ಕೆ ಬೆದರಿಕೆ ಒಡ್ಡುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ಥಾನ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅಮೆರಿಕ ಹೇಳಿದೆ...
ರಿಚರ್ಡ್‌ ಜಿ ಓಲ್ಸನ್‌
ರಿಚರ್ಡ್‌ ಜಿ ಓಲ್ಸನ್‌

ವಾಷಿಂಗ್ಟನ್‌: ಭಾರತಕ್ಕೆ ಬೆದರಿಕೆ ಒಡ್ಡುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ಥಾನ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅಮೆರಿಕ ಆರೋಪಿಸಿದೆ..

ಪಾಕಿಸ್ಥಾನದ ನೆರೆಯ ದೇಶಗಳಾದ ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಹೆಚ್ಚು ಬೆದರಿಕೆ ಒಡ್ಡುತ್ತಿರುವ ಭಯೋತ್ಪಾದಕ ಸಂಘಟನೆಗಳ ಮೇಲೆ ಇಸ್ಲಾಮಾಬಾದ್‌ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಿರುವ ರಿಚರ್ಡ್‌ ಜಿ ಓಲ್ಸನ್‌ ಹೇಳಿದ್ದಾರೆ.

ಪಾಕಿಸ್ತಾನದ ನೆಲದಿಂದ ಕಾರ್ಯಾಚರಣೆ ನಡೆಸುತ್ತಿರುವ ಹಾಗೂ ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಬೆದರಿಕೆ ಒಡ್ಡುತ್ತಿರುವ ಇತರ ಭಯೋತ್ಪಾದಕ ಸಂಘಟನೆಗಳಿಗಿಂತಲೂ ಹೆಚ್ಚಾಗಿ ತೆಹರೀಕ್‌ ಎ ತಾಲಿಬಾನ್‌ ಪಾಕಿಸ್ಥಾನ್‌ ಉಗ್ರ ಸಂಘಟನೆಯ ಮೇಲೆಯೇ ಹೆಚ್ಚು ಕಣ್ಣಿಟ್ಟಿದೆ ಎಂದು ಹೇಳಿದ್ದಾರೆ.

ಅಮೆರಿಕ ಸೆನೆಟ್‌ನ ವಿದೇಶ ಬಾಂಧವ್ಯಗಳ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ಪಾಕಿಸ್ತಾನದಲ್ಲಿ ಮೂರು ವರ್ಷಗಳ ಕಾಲ ಅಮೆರಿಕ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಓಲ್ಸನ್‌ ಅವರಿಗೆ ಸೆನೆಟರ್‌ಗಳು ಪಾಕಿಸ್ತಾನದಲ್ಲಿ ಈಗಲೂ ಉಗ್ರರ ಸುರಕ್ಷಾ ತಾಣಗಳು ಹಾಗೆಯೇ ಮುಂದುವರಿದಿವೆಯೇ ?' ಎಂದು ಕೇಳಿದರು.

ಇದಕ್ಕೆ ಉತ್ತರವಾಗಿ ಓಲ್ಸನ್‌ ಅವರು, "ಪಾಕಿಸ್ಥಾನವು ಅಫ್ಘಾನ್‌ ತಾಲಿಬಾನ್‌ಗಿಂತಲೂ ಪಾಕಿಸ್ಥಾನೀ ತಾಲಿಬಾನ್‌ಗೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com