ಜೂಜು: ಭಾರತೀಯರ ಗಡಿಪಾರು

ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಐವರು ಭಾರತೀಯರನ್ನು ಕುವೈಟ್ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಕುವೈಟ್‍ನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ದುಬೈ: ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಐವರು ಭಾರತೀಯರನ್ನು ಕುವೈಟ್ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಕುವೈಟ್‍ನಲ್ಲಿ ಜೂಜಿಗೆ ನಿಷೇಧವಿದೆ. 
ಹೀಗಿದ್ದಾಗ್ಯೂ, ಫಹೈಹೀ ಪ್ರದೇಶದಲ್ಲಿ ಐವರು ಭಾರತೀಯರು ಜೂಜಾಡುತ್ತಿದ್ದರು. ಇತರರು ಇವರ ಸುತ್ತ ನೆರೆದು, ಆಟವನ್ನು ವೀಕ್ಷಿಸುತ್ತಿದ್ದರು. ಆ ಸಮಯದಲ್ಲಿ ಪೊಲೀಸರ ಗಸ್ತುವಾಹನ ಅಲ್ಲಿಗೆ ಬಂದಿದ್ದು, ಜೂಜಾಡುತ್ತಿದ್ದವರ ಗುರುತಿನ ದಾಖಲೆಗಳನ್ನು ಕೇಳಿದೆ. 
ಐವರ ಪೈಕಿ ಇಬ್ಬರಲ್ಲಿ ದಾಖಲೆಗಳೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಿ, ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಇಲ್ಲಿನ ಯುವಕರು ಸಾಮಾಜಿಕ ಜಾಲತಾಣಗಳ ಮೂಲಕ ಪೋಕರ್, ಬ್ಲ್ಯಾಕ್ ಜಾಕ್, ರೂಲೆಟ್‍ನಂತಹ ಜೂಜಿನಲ್ಲಿ ತೊಡಗಿ ರುವುದು ಸರ್ಕಾರಕ್ಕೆ ತಲೆನೋವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com