ತಾತನ ಮೃತದೇಹದೊಂದಿಗೆ ಮೊಮ್ಮಗನ ಸೆಲ್ಫಿ!

ತಾತನ ಮೃತದೇಹದೊಂದಿಗೆ ತೆಗೆದ ಸೌದಿ ಅರೇಬಿಯಾದ ಬಾಲಕ ಸೆಲ್ಫಿ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೀಡಾಗಿದೆ...
ತಾತನ ಮೃತದೇಹದೊಂದಿಗೆ ಮೊಮ್ಮಗನ ಸೆಲ್ಫಿ
ತಾತನ ಮೃತದೇಹದೊಂದಿಗೆ ಮೊಮ್ಮಗನ ಸೆಲ್ಫಿ
Updated on

ಲಂಡನ್: ತಾತನ ಮೃತದೇಹದೊಂದಿಗೆ ತೆಗೆದ ಸೌದಿ ಅರೇಬಿಯಾದ ಬಾಲಕ ಸೆಲ್ಫಿ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೀಡಾಗಿದೆ.

ಆಸ್ಪತ್ರೆಯ ಬೆಡ್‌ನಲ್ಲಿರುವ ಮೃತ ಶರೀರದ ಮುಂದೆ ನಿಂತು ಸೆಲ್ಫಿ ಪೋಸ್‌ನಲ್ಲಿ ಫೋಟೋ ತೆಗೆದ ಬಾಲಕ , Good bye Grand Father ಎಂದು ಬರೆದು ಸಾಮಾಜಿಕ ತಾಣದಲ್ಲಿ ಫೋಟೋ ಅಪ್‌ಲೋಡ್ ಮಾಡಿದ್ದನು.

ಈ ಫೋಟೋ ನೋಡಿ ಹುಡುಗನ ಹುಡುಗಾಟಿಕೆ ಮತ್ತು ಪೆದ್ದುತನದ ಬಗ್ಗೆ ಎಲ್ಲರಿಗೂ ಅಚ್ಚರಿಯಾಗಿದೆ. ಹೆಚ್ಚಿನವರು ಈ ಬಾಲಕನಿಗೆ ಬೈದು ಕಾಮೆಂಟ್‌ಗಳನ್ನೂ ಹಾಕಿದ್ದಾರೆ.

ಆದಾಗ್ಯೂ, ಈ ಬಾಲಕ ಆಸ್ಪತ್ರೆಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಸೆಲ್ಫಿ ತೆಗೆಯಲು ಅನುವು ಮಾಡಿದ್ದ ಆಸ್ಪತ್ರೆಯ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಮೆದಿನಾದ ಆರೋಗ್ಯ ಇಲಾಖೆ ಹೇಳಿದೆ.

ಬಾಲಕನ ವರ್ತನೆಯನ್ನು ಖಂಡಿಸಿದ ಮೆದೀನಾದ ಸಾರ್ವಜನಿಕ ಸಂಪರ್ಕ ಹಾಗೂ ಮಾಧ್ಯಮದ ಮೇಲಾಧಿಕಾರಿ ಅಬ್ದುಲ್ ರಜಾಕ್ ಈ ಸೆಲ್ಫಿ ಬಾಲಕನ ಸಾಮಾಜಿಕ ಪ್ರಜ್ಞೆಯ ಕೊರತೆ ಹಾಗೂ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com