ರೈಲ್ವೆ ಹಳಿಗೆ ಜಿಗಿದು 18 ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿದ ಅಜ್ಜ

ಪವಾಡವೆಂಬಂತೆ ರೈಲಿನಡಿ ಸಿಲುಕುತ್ತಿದ್ದ 18 ತಿಂಗಳ ಮಗುವನ್ನು ಜೀವದ ಹಂಗನ್ನು ತೊರೆದ ಅಜ್ಜ ರಕ್ಷಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ....
ವಿಡಿಯೋ ತುಣುಕು (ಕೃಪೆ: youtube)
ವಿಡಿಯೋ ತುಣುಕು (ಕೃಪೆ: youtube)

ಸಿಡ್ನಿ: ಪವಾಡವೆಂಬಂತೆ ರೈಲಿನಡಿ ಸಿಲುಕುತ್ತಿದ್ದ 18 ತಿಂಗಳ ಮಗುವನ್ನು ಅಜ್ಜನೊಬ್ಬ ಜೀವದ ಹಂಗನ್ನು ತೊರೆದು ರಕ್ಷಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಆಸ್ಟ್ರೇಲಿಯಾದಲ್ಲಿರುವ ಸಿಖ್ ದೇವಸ್ಥಾನ ದರ್ಶನಕ್ಕಾಗಿ ಜುಲೈ 5 ರಂದು ಭಾರತದಿಂದ ಸಿಡ್ನಿಗೆ ಪ್ರಯಾಣ ಬೆಳೆಸಿದ್ದರು. ಸಿಡ್ನಿಯ ವೆಂಟ್ವರ್ಥ್ ವಿಲ್ಲೆ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು. ಈ ವೇಳೆ 18 ತಿಂಗಳ ಹೆಣ್ಣು ಮಗುವನ್ನು ಟ್ರ್ಯಾಲಿಯಲ್ಲಿ ಕೂರಿಸಲಾಗಿತ್ತು. ಅಚಾನಕ್ ಟ್ರ್ಯಾಲಿ ಮುಂದಕ್ಕೆ ಚಲಿಸಿ ಹಳಿ ಮೇಲೆ ಬಿದ್ದಿದೆ. ಇದನ್ನು ಕಂಡ ಅಜ್ಜ ಒಂದು ಕ್ಷಣವೂ ತಡಮಾಡದೆ ಹಳಿಗೆ ಜಿಗಿದಿದ್ದಾರೆ.

ಭಾರತೀಯ ಮೂಲದ ಸಿಖ್ ಸಮುದಾಯಕ್ಕೆ ಸೇರಿದ 62 ವರ್ಷದ ಅಜ್ಜ ತಮ್ಮ ಜೀವದ ಹಂಗನ್ನು ತೊರೆದು ಮೊಮ್ಮಗುವನ್ನು ಪ್ಲಾಟ್ ಫಾಂ ಮೇಲೆ ಎಸೆದು ತಾವು ಅದೇ ಪ್ಲಾಟ್ ಫಾಂನ ಮುಂದಕ್ಕೆ ಓಡಿ ಬಂದು ಬದಿಗೆ ಸರಿದಿದ್ದಾರೆ. ಇದು ನಡೆದ ಕೆಲ ಸೆಕೆಂಡ್ ಗಳಲ್ಲೇ ರೈಲ್ಲೊಂದು ಪಾಸಾಗಿದ್ದು, ಮಗು ಹಾಗೂ ಅಜ್ಜ ಇಬ್ಬರು ಬದುಕುಳಿದ್ದಾರೆ.

ಇದೆಲ್ಲವೂ ಕೇವಲ 10 ಸೆಕಂಡ್‌ಗಳ ಒಳಗೆ ನಡೆದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮಗುವಿಗೆ ತಲೆಗೆ ಸಣ್ಣ ಗಾಯ ಹೊರತು ಪಡಿಸಿ ಯಾವುದೇ ಅಪಾಯವಾಗಿಲ್ಲ. ಅಜ್ಜನ ಸಾಹಸಕ್ಕೆ ಆಸ್ಟ್ರೇಲಿಯಾ ಪೊಲೀಸರು ಶಹಬ್ಟಾಸ್‌ ಗಿರಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com