ಕೊಳಕು ಮಂಡಲ ಜತೆ ಸೆಲ್ಫಿ: ಜೀವಕ್ಕೆ ತಂದುಕೊಂಡ ಆಪತ್ತು

ತಮ್ಮ ನೆಚ್ಚಿನ ಸ್ನೇಹಿತರು ನಾಯಕರ ಅಥವಾ ನೆಚ್ಚಿನ ಜಾಗಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯುವ ಜನತೆ ಮುಂದಾಗುತ್ತೆ. ಆದರೆ ಇಲ್ಲೊಬ್ಬ ಭೂಪ ಕೊಳಕು ಮಂಡಲ...
ಸೆಲ್ಫಿ
ಸೆಲ್ಫಿ
Updated on: 

ಲಂಡನ್: ತಮ್ಮ ನೆಚ್ಚಿನ ಸ್ನೇಹಿತರು ನಾಯಕರ ಅಥವಾ ನೆಚ್ಚಿನ ಜಾಗಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯುವ ಜನತೆ ಮುಂದಾಗುತ್ತೆ. ಆದರೆ ಇಲ್ಲೊಬ್ಬ ಭೂಪ ಕೊಳಕು ಮಂಡಲ ಹಾವಿನ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತನ್ನ ಜೀವಕ್ಕೆ ಕುತ್ತು ತಂದುಕೊಂಡಿದ್ದಾನೆ.

ತಿಂಗಳ ಆರಂಭದಲ್ಲಿ ಫಾಸ್ಲರ್ ಎಂಬ ಯುವಕ ತಾನು ಸಾಕಿಕೊಂಡಿದ್ದ ಕೊಳಕು ಮಂಡಲ ಜತೆ ಸೆಲ್ಫಿ ತೆಗೆದುಕೊಳ್ಳುಲು ಹೋಗಿದ್ದಾನೆ. ಈ ವೇಳೆ ಫಾಸ್ಲರ್ ಗೆ ಹಾವು ಕಚ್ಚಿದೆ. ಭಾರೀ ವಿಷ ಆತನ ದೇಹ ಸೇರಿದೆ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯ ಬಿಲ್ಲು 99 ಲಕ್ಷ ಆಗಿದೆ.

ಹಾವು ಕಚ್ಚಿದ ಸಂದರ್ಭದಲ್ಲಿ ನನ್ನ ದೇಹ ಸಂಪೂರ್ಣವಾಗಿ ಅಲುಗಾಡುತ್ತಿತ್ತು. ಅಲ್ಲದೆ ನನ್ನ ದೇಹ ಸಂಪೂರ್ಣ ಪಾರ್ಶ್ವವಾಯುಗಿಡಾಗಿತ್ತು. ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬ ಮಾತುಗಳನ್ನು ಫಾಸ್ಲರ್ ಹೇಳಿದ್ದಾರೆ.

ಫಾಸ್ಲರ್ ದೇಹಕ್ಕೆ ತೀವ್ರತರದ ವಿಷ ಸೇರಿದ್ದರಿಂದ ದೇಹದ ಕೆಲ ಭಾಗಗಳು ಕೊಳೆತಿವೆ.

ಇನ್ನು ಮುಂದಾದರು ಯುವ ಜನತೆ ಕಾಡು ಪ್ರಾಣಿಗಳು ಹಾಗೂ ವಿಷಯುಕ್ತ ಹಾವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮುನ್ನ ಒಂದು ಸಲ ಯೋಚಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com