ಹಣದಲ್ಲೇ ಹಾಸಿಗೆ ಮಾಡಿಕೊಂಡಳು ವೃದ್ಧೆ

ದುಡಿದ ಹಣ ಮತ್ತು ಆಸ್ತಿ ತನ್ನ ನಂತರ ಮಕ್ಕಳು ಮೊಮ್ಮಕ್ಕಳಿಗೆ ಹೋಗಲಿ ಎಂದು ವಿಲ್ ಬರೀತಾರೆ. ಆದರೆ ಇಲ್ಲೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಯೆನ್ನಾ: ದುಡಿದ ಹಣ ಮತ್ತು ಆಸ್ತಿ ತನ್ನ ನಂತರ ಮಕ್ಕಳು ಮೊಮ್ಮಕ್ಕಳಿಗೆ ಹೋಗಲಿ ಎಂದು ವಿಲ್ ಬರೀತಾರೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವಿದೆ. 
ಮಕ್ಕಳು ಮೊಮ್ಮಕ್ಕಳಿಗೆ ಬಿಡಿಗಾಸೂ ಸಿಗಬಾರದೆಂದು ಎಲ್ಲ ದುಡ್ಡನ್ನು ಹರಿದು ಚಿಂದಿ ಮಾಡಿ ಅದನ್ನು ಹಾಸಿಗೆಯಲ್ಲಿ ತುಂಬಿಸಿಟ್ಟುಕೊಂಡಿದ್ದಳಂತೆ ಆಸ್ಟ್ರಿಯಾದ ಒಬ್ಬ ವೃದ್ಧೆ! 
85ರ ಈ ವೃದ್ಧೆ ಸಾವನ್ನಪ್ಪಿದಾಗ ಆಕೆ ಹಾಸಿಗೆಯೊಳಗಡೆ ರು.71.9 ಲಕ್ಷ ಉಪಯೋಗಿಸಲಾರದ ಸ್ಥಿತಿಯಲ್ಲಿ ಸಿಕ್ಕಿದೆ. ಇದಲ್ಲದೆ 9.5ಲಕ್ಷ ಪೌಂಡ್ ನಷ್ಟು ಹಣ, ಉಳಿತಾಯ ಖಾತೆಯ ಪಾಸ್ ಬುಕ್ ಎಲ್ಲವೂ ಹರಿದ ಸ್ಥಿತಿಯಲ್ಲೇ ಸಿಕ್ಕಿದೆ. 
ಇದಲ್ಲದೆ 9.5ಲಕ್ಷ ಪೌಂಡ್‍ನಷ್ಟು ಹಣ, ಉಳಿತಾಯ ಖಾತೆಯ ಪಾಸ್‍ಬುಕ್ ಎಲ್ಲವೂ ಹರಿದ ಸ್ಥಿತಿಯಲ್ಲೇ ಸಿಕ್ಕಿವೆ. ಪಾಸ್‍ಬುಕ್‍ನಲ್ಲಿ ಆರಂಕಿ ಮೊತ್ತದ ಹಣ ಬ್ಯಾಂಕ್‍ನಲ್ಲಿರುವುದಕ್ಕೆ ಪುರಾವೆಯೂ ಸಿಕ್ಕಿದೆ. ಆದರೆ ಹಣ ಆಕೆಯೇ ನಾಶಮಾಡಿರುವುದರಿಂದ ಕೇಸ್ ಕೂಡ ಹಾಕಲಾಗದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com