ಪ್ಯಾರಿಸ್ ದಾಳಿ ಬೆನ್ನಲ್ಲೇ ಇಸಿಸ್ ವಿರುದ್ಧ ವಾಯುದಾಳಿ, ಉಗ್ರ ಮುಖಂಡನ ಸಾವು

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ಭೀಕರ ಉಗ್ರ ದಾಳಿ ಬೆನ್ನಲ್ಲೇ ಲಿಬಿಯಾದಲ್ಲಿ ಇಸಿಸ್ ವಿರುದ್ಧ ಅಮೆರಿಕ ಸೇನೆಯ ವಾಯುದಾಳಿ ಮುಂದುವರೆದಿದ್ದು, ಉಗ್ರ ಮುಖಂಡನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ...
ಲಿಬಿಯಾದಲ್ಲಿ ಇಸಿಸ್ ಪಡೆಗಳ ಮೇಲೆ ವಾಯುದಾಳಿ (ಸಂಗ್ರಹ ಚಿತ್ರ)
ಲಿಬಿಯಾದಲ್ಲಿ ಇಸಿಸ್ ಪಡೆಗಳ ಮೇಲೆ ವಾಯುದಾಳಿ (ಸಂಗ್ರಹ ಚಿತ್ರ)
Updated on: 

ವಾಷಿಂಗ್ ಟನ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ಭೀಕರ ಉಗ್ರ ದಾಳಿ ಬೆನ್ನಲ್ಲೇ ಲಿಬಿಯಾದಲ್ಲಿ ಇಸಿಸ್ ವಿರುದ್ಧ ಅಮೆರಿಕ ಸೇನೆಯ ವಾಯುದಾಳಿ ಮುಂದುವರೆದಿದ್ದು, ಉಗ್ರ  ಮುಖಂಡನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಪೆಂಟಗಾನ್ ಮೂಲಗಳು ತಿಳಿಸಿರುವಂತೆ ಕಳೆದ ರಾತ್ರಿ ಲಿಬಿಯಾದಲ್ಲಿರುವ ಇಸಿಸ್ ನೆಲೆಗಳ ಮೇಲೆ ಅಮೆರಿಕ ಮಿತ್ರ ಪಡೆಗಳು ವಾಯು ದಾಳಿ ನಡೆಸಿದ್ದು, ದಾಳಿಯಲ್ಲಿ ಇಸಿಸ್ ಮುಖಂಡ ಅಬು  ನಬಿಲ್ ಅಲಿಯಾಸ್ ವಿಸ್ಸಾಮ್ ನಿಜ್ಮ್ ಅಬ್ದುಲ್ ಜ್ಯಾದ್ ಅಲ್ ಝುಬಾಯ್ದಿ ಸಾವನ್ನಪ್ಪಿದ್ದಾನೆ. ಮೂಲತಃ ಇರಾಕ್ ಮೂಲದವನಾದ ಅಬು ನಬಿಲ್ ಈ ಹಿಂದೆ ಅಲ್ ಖೈದಾ ಉಗ್ರ  ಸಂಘಟನೆಯಲ್ಲಿದ್ದ. ಬಳಿಕ ಲಿಬಿಯಾದಲ್ಲಿ ಇಸಿಸ್ ಘಟಕಕ್ಕೆ ಮುಖಂಡನಾಗಿ ನೇಮಕನಾಗಿದ್ದ ಎಂದು ಮೂಲಗಳು ತಿಳಿಸಿವೆ.

ಲಿಬಿಯಾದಲ್ಲಿದ್ದುಕೊಂಡೇ ಇಸಿಸ್ ಗೆ ಯುವಕರನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅಲ್ಲದೆ ಅಮೆರಿಕದಲ್ಲಿ ಬಾಹ್ಯ ದಾಳಿ ನಡೆಸಲು ಅಬು ನಬಿಲ್ ಸಂಚು ರೂಪಿಸಿದ್ದನು  ಎಂದು ವಿದೇಶಿ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿದ್ದವು. ಈ ನಿಟ್ಟಿನಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿದ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಲಿಬಿಯಾ ಇಸಿಸ್ ಉಗ್ರರ ನೆಲೆಗಳ ವಾಯುದಾಳಿ ನಡೆಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com