

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ರೈತನೊಬ್ಬ ಭಲೆ ಐಡಿಯಾ ಮಾಡಿದ್ದಾನೆ. ಕಡಿಮೆ ಮಳೆ ಬೀಳುವ ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಅಪ್ಪಳಿಸುವ ಎಲ್ ನಿನೊ ಚಂಡಮಾರುತ ತರುವ ಭರ್ಜರಿ ಮಳೆಯನ್ನು ಬಳಸಿಕೊಳ್ಳುವುದೇ ಆತನ ಉಪಾಯ.
ಇತರ ರೈತರನ್ನೂ ಪ್ರೇರೇಪಿಸಿದ ಡಾನ್ ಕ್ಯಾಮೆರಾನ್, ಚೆಕ್ ಡ್ಯಾಮ್, ನೀರಿಂಗಿಸುವ ಕೊಳಗಳನ್ನು ನಿರ್ಮಿಸಿದ ಚಂಡಮಾರುತ ದಿಂದ ಉಂಟಾಗುವ ಪ್ರವಾಹದ ನೀರನ್ನು ನೇರವಾಗಿ ಇಂಥ ಸರಣಿ ಕೆರೆ, ಚೆಕ್‍ಡ್ಯಾಮïಗಳಿಗೆ ಹರಿಯುವಂತೆ ಮಾಡುವ ವ್ಯವಸ್ಥೆ ಮಾಡಿದ್ದಾನೆ. ಪರಿಣಾಮ ಅಂತರ್ಜಲ ಏರುತ್ತಿದ್ದು, ಬರಪೀಡಿತ ಪ್ರದೇಶ ಈಗ ಕೃಷಿ ಸಮೃದ್ಧಿಯಿಂದ ಕಂಗೊಳಿಸುತ್ತಿದೆ.
Advertisement