ಮದ್ಯ ಮಾರಾಟ ಲೈಸೆನ್ಸ್ ಪಡೆದ ಭಾರತ ಸಂಜಾತ

ಭಾರತೀಯ ಮೂಲದ ವರ್ತಕರೊಬ್ಬರು ಇಲ್ಲಿನ ಗ್ರಾಮವೊಂದರಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಜಯ ಗಳಿಸಿ ಚರಿತ್ರೆ ಸೃಷ್ಟಿಸಿದ್ದಾರೆ...
ಮದ್ಯಮಾರಟ ಪರವಾನಗಿ ಪಡೆದ ಕಮಲ್ ಶರ್ಮಾ (ಚಿತ್ರಕೃಪೆ: ಡೈಲಿಮೇಲ್)
ಮದ್ಯಮಾರಟ ಪರವಾನಗಿ ಪಡೆದ ಕಮಲ್ ಶರ್ಮಾ (ಚಿತ್ರಕೃಪೆ: ಡೈಲಿಮೇಲ್)
Updated on: 

ಲಂಡನ್: ಭಾರತೀಯ ಮೂಲದ ವರ್ತಕರೊಬ್ಬರು ಇಲ್ಲಿನ ಗ್ರಾಮವೊಂದರಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಜಯ ಗಳಿಸಿ ಚರಿತ್ರೆ ಸೃಷ್ಟಿಸಿದ್ದಾರೆ.

ಈ ವ್ಯಾಜ್ಯದಲ್ಲಿ ಜಯ ಸಾಧಿಸಿರುವುದು ಭಾರತೀಯ ಮೂಲದ ವರ್ತಕ ಕಮಲ್ ಶರ್ಮ. 38 ವರ್ಷದ ಕಮಲ್ ಶರ್ಮ ವೆಸ್ಟ್ ಮಿಡ್‍ಲ್ಯಾಂಡ್ ಪ್ರದೇಶದ ಬರ್ಮಿಂಗ್ ಹ್ಯಾಂ ಬಳಿಯ ಬೋರ್ನ್‍ವಿಲ್ಲೆ  ಗ್ರಾಮದಲ್ಲಿ ದಿನಸಿ ಮಳಿಗೆಯೊಂದನ್ನು ನಡೆಸುತ್ತಿದ್ದಾರೆ. ಈ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲು ಹಲವರು ವಿರೋಧಿಸಿದ್ದರು. ಬೋರ್ನ್‍ವಿಲ್ಲೆ ಗ್ರಾಮವನ್ನು ಚಾಕೋಲೇಟ್ ಕಂಪನಿ  ಕ್ಯಾಡ್‍ಬರಿ ಕುಟುಂಬ ನಿರ್ಮಾಣ ಮಾಡಿದೆ. ಇದು ಸಾಂಪ್ರದಾಯಿಕ ಗ್ರಾಮವಾಗಿದ್ದು 120 ವರ್ಷಗಳಿಂದಲೂ ಇಲ್ಲಿ ಮದ್ಯ ಮಾರಾಟ ಮಾಡುತ್ತಿಲ್ಲ.

ಮದ್ಯ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ಮನವಿಗೆ ಪರವಾಗಿ 400 ಮತ್ತು 230 ಮಂದಿ ವಿರುದ್ಧವಾಗಿ ಸಹಿ ಮಾಡಿದ್ದರು. ಇದನ್ನು ಪರಿಗಣಿಸಿದ ಬರ್ಮಿಂಗ್‍ಹ್ಯಾಮ್ ಸಿಟಿ ಕೌನ್ಸಿಲ್  ಪರವಾನಗಿ ಉಪ ಸಮಿತಿ ಶರ್ಮಗೆ ಮದ್ಯ ಮಾರಾಟಕ್ಕೆ ಷರತ್ತುಬದ್ಧ ಪರವಾನಗಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com