ಸಿರಿಯಾದಲ್ಲಿ ರಷ್ಯಾ ಕೈಗೊಂಡಿರುವ ವೈಮಾನಿಕ ದಾಳಿ ಉಗ್ರರ ವಿರುದ್ಧ ಅಲ್ಲ: ಅಮೆರಿಕ

ಸಿರಿಯಾದಲ್ಲಿ ರಷ್ಯಾ ಕೈಗೊಂಡಿರುವ ವೈಮಾನಿಕ ದಾಳಿ ಪೈಕಿ ಶೇ.90 ರಷ್ಟು ದಾಳಿ ಐಎಸ್, ಅಲ್ ಖೈದಾ ಉಗ್ರರನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಅಮೆರಿಕ ಆರೋಪಿಸಿದೆ.
ವೈಮಾನಿಕ ದಾಳಿ(ಸಂಗ್ರಹ ಚಿತ್ರ)
ವೈಮಾನಿಕ ದಾಳಿ(ಸಂಗ್ರಹ ಚಿತ್ರ)

ವಾಷಿಂಗ್ಟನ್: ಸಿರಿಯಾದಲ್ಲಿ ರಷ್ಯಾ ಕೈಗೊಂಡಿರುವ ವೈಮಾನಿಕ ದಾಳಿ ಪೈಕಿ ಶೇ.90 ರಷ್ಟು ದಾಳಿ ಐಎಸ್, ಅಲ್ ಖೈದಾ ಉಗ್ರರನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಅಮೆರಿಕ ಆರೋಪಿಸಿದೆ.
ಐಎಸ್ ಉಗ್ರರ ವಿರುದ್ಧ ರಷ್ಯಾ ವೈಮಾನಿಕ ದಾಳಿ ನಡೆಸಲು ಪ್ರಾರಂಭಿಸಿ ಒಂದು ವಾರ ಕಳೆದಿದ್ದರೂ ಶೇ.90 ರಷ್ಟು ದಾಳಿಗಳು ಉಗ್ರರನ್ನು ಗುರಿಯಾಗಿರಿಸಿಕೊಂಡು ನಡೆದಿಲ್ಲದೇ ಇರುವುದನ್ನು ನಾವು ಗಮನಿಸಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ.
ರಷ್ಯಾದ ವೈಮಾನಿಕ ದಾಳಿ ಗುರಿ ಬಗ್ಗೆ ಇದೇ ಮೊದಲ ಬಾರಿಗೆ ಅಮೆರಿಕ ಅಂಕಿ-ಅಂಶಗಳನ್ನು ಉಲ್ಲೇಖ ಮಾಡಿದೆ. ಸಿರಿಯಾದಲ್ಲಿರುವ ವಿರೋಧಪಕ್ಷಗಳು ರಷ್ಯಾದ ವೈಮಾನಿಕ ದಾಳಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ನಾಗರಿಕ ಸಾವುನೋವುಗಳಿಗೆ ಕಾರಣವಾಗುತ್ತಿರುವ ಆರೋಪ ಮಾಡಿವೆ ಎಂದು ಅಮೆರಿಕ ಹೇಳಿದೆ.
ಅಮೆರಿಕ ಆರೋಪವನ್ನು ರಷ್ಯಾ ಅಲ್ಲಗಳೆದಿದೆ. ಅಲ್ಲದೇ ಕ್ರೂಸ್ ಮಿಸೈಲುಗಳನ್ನು ಬಳಸಿ ಮತ್ತೊಂದು ಹಂತದ ವಾಯುದಾಳಿಯನ್ನು ನಡೆಸಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com