5 ವರ್ಷಗಳ ಹಿಂದಿನ ಚೀನಾ ಸನಿಹಕ್ಕೂ ಭಾರತ ಬಾರದು: ಚೀನಾ ಪತ್ರಿಕೆ

ಅಮೆರಿಕದ ತಂತ್ರಜ್ಞಾನ ಕಂಪನಿಗಳಿಗೆ ಚೀನಾ ಪ್ರಮುಖ ದೇಶ ಸ್ಥಾನವನ್ನು ಭಾರತ ಪಲ್ಲಟಗೊಳಿಸಲಿದೆ ಎಂದು ದಿ ನ್ಯೂಯಾರ್ಕ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಅಮೆರಿಕದ ತಂತ್ರಜ್ಞಾನ ಕಂಪನಿಗಳಿಗೆ ಚೀನಾ ಪ್ರಮುಖ ದೇಶ ಸ್ಥಾನವನ್ನು ಭಾರತ ಪಲ್ಲಟಗೊಳಿಸಲಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಇತ್ತೀಚೆಗೆ ವರದಿ ಮಾಡಿತ್ತು.

 ಇದಕ್ಕೆ ಪ್ರತಿಯಾಗಿ ಚೀನಾದ ಗ್ಲೋಬಲ್ ಟೈಮ್ಸ್ನಲ್ಲಿ ಗುರುವಾರ ವರದಿಯೊಂದು ಪ್ರಕಟವಾಗಿದ್ದು, ಐದು ವರ್ಷಗಳ ಹಿಂದೆ ಚೀನಾ ಇದ್ದ ಸ್ಥಾನದ ಸನಿಹಕ್ಕೂ ಭಾರತ ಬರಲು ಸಾಧ್ಯವಿಲ್ಲ ಎಂದಿದೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದರು. 
ಈ ಸಂದರ್ಭದಲ್ಲಿ ಅಮೆರಿಕದ ಬೃಹತ್ ಟೆಕ್ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಬಿಜೆಪಿ ಸರ್ಕಾರ ಜಿಎಸ್‍ಟಿ ಜಾರಿ ಮಾಡಲು ಸಂಸತ್ತಿನ ಅನುಮೋದನೆ ಪಡೆಯಲೂ ಅಸಮರ್ಥವಾಗಿದೆ ಎಂದು ಪತ್ರಿಕೆ ವಿಶ್ಲೇಷಿಸಿದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮೋದಿ ವಿಫಲವಾಗಿರುವ ಪರಿಸ್ಥಿತಿಯಲ್ಲಿ ಇಂಟರ್‍ನೆಟ್ ಆಧರಿತ ಆರ್ಥಿಕತೆಯನ್ನು ಬೆಳೆಸುವುದು ದುಸ್ಸಾಧ್ಯ ಎಂದು ಲೇಖನದಲ್ಲಿ ಹೇಳಲಾಗಿದೆ. 
ಇಂಟರ್‍ನೆಟ್ ಅಭಿವೃದ್ಧಿಯಾಗುವುದನ್ನು ಒಟ್ಟಾರೆ ಆರ್ಥಿಕ ಪ್ರಗತಿಯಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಭಾರತದ ಮಾರುಕಟ್ಟೆಗಳನ್ನು ಸಮಗ್ರಗೊಳಿಸದೆ, ಸ್ಪರ್ಧಾತ್ಮಕತೆ ಹೆಚ್ಚಿಸದೆ, ಉತ್ಪಾದನಾ ಕ್ಷೇತ್ರವನ್ನು ಬಲಿಷ್ಠಗೊಳಿಸ ದೆ ಇಂಟರ್‍ನೆಟ್ ಆರ್ಥಿಕತೆ ವೇಗವಾಗಿ ಮುನ್ನಡೆಯಲು ಸಾಧ್ಯವಿಲ್ಲ ಎಂದಿದೆ. 
ಆದರೆ ಒಇಸಿಡಿ ಸೂಚ್ಯಂಕ ಗುರುವಾರ ಬಿಡುಗಡೆಯಾಗಿದ್ದು, ಜಗತ್ತಿನ ಎಲ್ಲ ಪ್ರಮುಖ ದೇಶಗಳಲ್ಲಿನ ಆರ್ಥಿಕತೆ ಹಿಂಜರಿತದಲ್ಲಿದೆ. ಫಾ್ರನ್ಸ್, ಜರ್ಮನಿ ಮತ್ತು ಭಾರತದ ಆರ್ಥಿಕತೆ ಪ್ರಗತಿಯಲ್ಲಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com