ಸುರೇಶ್ ಭಾಯ್ ಪಟೇಲ್ ನಿಂದ ಆತಂಕ ಇರಲಿಲ್ಲ: ಅಮೇರಿಕ ಪೊಲೀಸ್

ಅಮೆರಿಕಾದ ಅಲ್ಬಾಮ ಪೋಲಿಸರಿಂದ ಹಲ್ಲೆಗೊಳಗಾಗಿದ್ದ ಗುಜರಾತ್ ಮೂಲದ ವೃದ್ಧ ವ್ಯಕ್ತಿಯಿಂದ ಆತಂಕ ಇರಲಿಲ್ಲ
ಹಲ್ಲೆಗೊಳಗಾಗಿದ್ದ ಸುರೇಶ್ ಭಾಯ್ ಪಟೇಲ್
ಹಲ್ಲೆಗೊಳಗಾಗಿದ್ದ ಸುರೇಶ್ ಭಾಯ್ ಪಟೇಲ್

ವಾಷಿಂಗ್ಟನ್: ಅಮೆರಿಕಾದ ಅಲ್ಬಾಮ ಪೋಲಿಸರಿಂದ ಹಲ್ಲೆಗೊಳಗಾಗಿದ್ದ ಗುಜರಾತ್ ಮೂಲದ ವೃದ್ಧ ವ್ಯಕ್ತಿಯಿಂದ ಆತಂಕ ಇರಲಿಲ್ಲ ಎಂದು ಹಲ್ಲೆ ನಡೆಸಿದ್ದ ಪೊಲೀಸ್ ಅಧಿಕಾರಿಯ ಸಹೋದ್ಯೋಗಿ ಹೇಳಿಕೆ ನೀಡಿದ್ದಾರೆ. 
ಸುರೇಶ್ ಭಾಯ್ ಪಟೇಲ್ ಎಂಬ ವ್ಯಕ್ತಿ ತಮ್ಮ ಪುತ್ರನನ್ನು ಭೇಟಿ ಮಾಡಲು ಅಮೇರಿಕಕ್ಕೆ ತೆರಳಿದ್ದರು. ಸುರೇಶ್ ಭಾಯ್ ಪಟೇಲ್  ಮನೆ ಎದುರು ನಡೆದು ಹೋಗುತ್ತಿರಬೇಕಾದರೆ ಕಳೆದ ಫೆಬ್ರವರಿಯಲ್ಲಿ ಅಲ್ಬಾಮಾ ಪೊಲೀಸರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಹೇಳಿಕೆ ನೀಡಿರುವ ಪೊಲೀಸ್ ಅಧಿಕಾರಿ ಚಾರ್ಲ್ಸ್ ಸ್ಪೆನ್ಸ್, ಸುರೇಶ್ ಭಾಯ್ ಪಟೇಲ್ ಯಾವುದೇ ರೀತಿಯ ಅಪರಾಧದ ನಡವಳಿಕೆ ತೋರಿರಲಿಲ್ಲ ಎಂದು ಹೇಳಿದ್ದಾರೆ.
ಹಲ್ಲೆ ಪ್ರಕರಣದ ಆರೋಪಿ ಪೊಲೀಸ್ ಅಧಿಕಾರಿಯನ್ನು ಖುಲಾಸೆಗೊಳಿಸುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ತೀರ್ಪುಗಾರರಲ್ಲೇ ಒಡಕುಂಟಾಗಿದ್ದ ಕಾರಣ ತೀರ್ಪು ಪ್ರಕಟವಾಗದೇ ಮೊದಲ ಹಂತದ ತನಿಖೆ ಸ್ಥಗಿತಗೊಂಡಿತ್ತು.  ಸುರೇಶ್ ಭಾಯ್ ಮೇಲೆ ಬಲಪ್ರಯೋಗ ಮಾಡುವುದು ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸ್ಪೆನ್ಸ್, ಬಲಪ್ರಯೋಗ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಹಲ್ಲೆಗೊಳಗಾಗುವುದಕ್ಕೂ ಮುನ್ನ ವೃದ್ಧ ಪೊಲೀಸರನ್ನು ತನ್ನ ಮಗನ ಮನೆಯತ್ತ ಕರೆದುಕೊಂಡು ಹೋಗಲು ಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ಎರಿಕ್ ಪಾರ್ಕರ್ ಎಂಬ ಪೊಲೀಸ್ ಅಧಿಕಾರಿಯು ಕಾಲಿನಿಂದ ಒದ್ದು  ತಲೆ ಮತ್ತು ಭುಜವನ್ನು ಬಲವಾಗಿ ಹಿಡಿದು ಹಲ್ಲೆ ನಡೆಸಿದ್ದರು.
ಭಾರತದ ಸುರೇಶ್ ಭಾಯ್ ಪಟೇಲ್ ತಮ್ಮ ಮನೆಯ ಹೊರಗೆ ಸುತ್ತಾಡುತ್ತಿರುತ್ತಾರೆ. ಆ ವೇಳೆ, ಪಕ್ಕದ ಮನೆಯಾತ ಪೊಲೀಸರಿಗೆ ಫೋನ್ ಮಾಡಿ ಇಲ್ಲೊಬ್ಬ ಕಪ್ಪು ಮನುಷ್ಯ ತನ್ನ ಗ್ಯಾರೇಜಿನ ಸಮೀಪ ನಡೆದಾಡುತ್ತಿದ್ದಾನೆ. ತಾನೆಂದೂ ಆತನನ್ನು ನೋಡಿಲ್ಲ. ಸುರೇಶ್ ಭಾಯ್ ಪಟೇಲ್ ಮನೆಯ ಹೊರಗೆ ಅಡ್ಡಾಡುತ್ತಿರುವುದರಿಂದ ಭಯವಾಗುತ್ತಿದೆ ಎಂದು ದೂರು ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಿಮಿಸಿ ವಿಚಾರಣೆ ನಡೆಸಿದ್ದ ಪೊಲೀಸರು ಸುರೇಶ್ ಭಾಯ್ ಮೇಲೆ ಹಲ್ಲೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com