ಹಸಿವಾದರೆ ಗಂಡ ಹೆಂಡತಿಯನ್ನೇ ತಿನ್ನಬಹುದು: ಫತ್ವಾ ಹೊರಡಿಸಿದ ಸೌದಿ ಧರ್ಮಗುರು
ಅಬುಧಾಬಿ: ಚರ್ಚುಗಳನ್ನು ಧ್ವಂಸಗೊಳಿಸಿ ಎಂದು ಕರೆ ನೀಡಿ ಈ ಹಿಂದೆ ವಿವಾದದ ಕೇಂದ್ರಬಿಂದುವಾಗಿದ್ದ ಸೌದಿ ಅರೇಬಿಯಾದ ಧರ್ಮಗುರು ಮುಫ್ತಿ ಶೇಖ್ ಅಬ್ದುಲ್ ಅಜೀಝ್ ಇದೀಗ ಮತ್ತೊಂದು ಹೇಳಿಕೆಯೊಂದನ್ನು ನೀಡಿದ್ದು, ಹಸಿವಾದರೆ ಗಂಡ ಹೆಂಡತಿಯನ್ನೇ ತಿನ್ನಬಹುದು ಎಂದು ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದ್ದು, ಮುಫ್ತಿ ಶೇಖ್ ಅಬ್ದುಲ್ ಅಜೀಝ್ ಅವರು ಗಂಡನಾದವನು ತೀವ್ರ ಹಸಿವಿನಲ್ಲಿದ್ದರೆ ಹೆಂಡತಿಯನ್ನು ತಿನ್ನಬಹುದು ಎಂದು ಫತ್ವಾ ಹೊರಡಿಸಿದ್ದು, ಇದು ಮಹಿಳೆಯ ತ್ಯಾಗ ಮತ್ತು ಗಂಡನಿಗೆ ಆಕೆಯ ವಿಧೇಯತನೆಯನ್ನು ತೋರಿಸುತ್ತದೆ ಎಂದು ಸಮರ್ಥನೆ ನೀಡಿದ್ದಾರೆಂದು ವರದಿ ಮಾಡಿದೆ.
ಮುಫ್ತಿ ಶೇಖ್ ಅಬ್ದುಲ್ ಅಜೀಝ್ ಹೊರಡಿಸಿರುವ ಈ ಫತ್ವಾವೀಗ ಸಾಮಾಜಿಕ ಜಾಲತಾಣದಾದ್ಯಂತ ಭಾರೀ ಸುದ್ದಿ ಮಾಡುತ್ತಿದೆ. ಧರ್ಮಗುರು ಹೊರಡಿಸಿರುವ ಈ ಫತ್ವಾವಿಗೆ ಅಲ್ಲಿನ ಸರ್ಕಾರ ಒಪ್ಪಿಗೆಯ ಮುದ್ರೆ ಒತ್ತಿದೆ ಎಂದು ಹೇಳಲಾಗುತ್ತಿದೆ ಆದರೂ, ಈ ಬಗ್ಗೆ ಅಲ್ಲಿನ ಸರ್ಕಾರ ಅಧಿಕೃತವಾಗಿ ಯಾವುದೇ ಪ್ರಕಟಣೆಗಳನ್ನು ಹೊರಡಿಸಿಲ್ಲ.
ಮಾನವ ಹಕ್ಕುಗಳ ಉಲ್ಲಂಘನೆಗೆ ಹೆಸರುವಾಸಿ ಎಂದೇ ಹೇಳಲಾಗುತ್ತಿರುವ ಸೌದಿಯ ಈ ಫತ್ವಾವು ಇದೀಗ ಮಹಿಳೆಯರ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಧರ್ಮಗುರು ಹೊರಡಿಸಿರುವ ಈ ಫತ್ವಾಕ್ಕೆ ಇದೀಗ ಹಲವು ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧ ಕೇಳಿಬಂದ ಈ ಆರೋಪವನ್ನು ತಳ್ಳಿಹಾಕಿರುವ ಮುಫ್ತಿ ಶೇಕ್ ಅವರು, ತಮ್ಮ ಉದ್ದೇಶವನ್ನು ಯಶಸ್ವಿಗೊಳಿಸುವ ಸಲುವಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕೆಲವು ಶತ್ರುಗಳ ನನ್ನ ವಿರುದ್ಧ ಪಿತೂರಿ ನಡೆಸಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ