ಅಬ್ಬಾ! ಆ ಹಳ್ಳಿಯ ಹೆಸರು ಎಷ್ಟುದ್ದ?

ಚಾನೆಲ್ 4. ಬ್ರಿಟನ್ನಿನ ಈ ನ್ಯೂಸ್ ಚಾನೆಲ್ಲನ್ನು ಎಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅದಕ್ಕಿಂತ ದುಪ್ಪಟ್ಟು ಪರಿಚಿತಗೊಂಡಿರುವ ಮನುಷ್ಯ ಆ ನ್ಯೂಸ್ ಚಾನೆಲ್ಲಿನ ಲಿಯಾಮ್ ಡಟನ್.
ಚಾನೆಲ್ 4 ನಿರೂಪಕ ಲಿಯಾಮ್ ಡಟನ್
ಚಾನೆಲ್ 4 ನಿರೂಪಕ ಲಿಯಾಮ್ ಡಟನ್
Updated on: 

ಲಂಡನ್: ಚಾನೆಲ್ 4. ಬ್ರಿಟನ್ನಿನ ಈ ನ್ಯೂಸ್ ಚಾನೆಲ್ಲನ್ನು ಎಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅದಕ್ಕಿಂತ ದುಪ್ಪಟ್ಟು ಪರಿಚಿತಗೊಂಡಿರುವ ಮನುಷ್ಯ ಆ ನ್ಯೂಸ್ ಚಾನೆಲ್ಲಿನ ಲಿಯಾಮ್  ಡಟನ್.

ಈತ ಆ ಚಾನೆಲ್ಲಿನಲ್ಲಿ ವೆದರ್ ಆ್ಯಂಕರ್. ಎಲ್ಲೆಲ್ಲಿ ಎಷ್ಟೆಷ್ಟು ತಾಪಮಾನ ಇದೆ, ಇವತ್ತು ಎಲ್ಲಿ ಮಳೆ ಬರುತ್ತೆ ಅಂತ ದೊಡ್ಡ ಡಿಜಿಟಲ್ ಮಾ್ಯಪಿನೆದುರು ನಿಂತು ಹೇಳುತ್ತಾನೆ. ಲಿಯಾಮ್  ಈ  ಕೆಲಸ ಮಾಡುತ್ತ ನಾಲ್ಕೈದು ವರುಷವಾಯಿತು. ಬ್ರಿಟನ್ ಹೊರತಾಗಿ ಈತ ಅಷ್ಟೊಂದು ಪರಿಚಿತಗೊಂಡಿರಲಿಲ್ಲ. ಆದರೆ, ಮೊನ್ನೆ ಸೆ.9ರಂದು ಈತನ ಹೆಸರು ವಿಶ್ವವ್ಯಾಪಿ ಆಯಿತು. ಈತನ ಸ್ಪಷ್ಟ  ಉಚ್ಛಾರಣೆಗೆ ಎಲ್ಲೆಡೆಯಿಂದ ಪ್ರಶಂಸೆ ಸುರಿದು ಬಂತು. ಅಂದಹಾಗೆ, ಈತನನ್ನು ಜಗವ್ಯಾಪಿ ಮಾಡಿಸಿದ್ದು ನಾರ್ತ್‍ವೆಸ್ಟ್ ವೇಲ್ಸ್ ನ ಒಂದು ಹಳ್ಳಿ. ಈ ಹಳ್ಳಿಯ ಹೆಸರೇನು ಗೊತ್ತಾ?

Llanfairpwllgwyngyllgogerychwyrndrobwllllantysiliogogogoch.. ಉಚ್ಚರಿಸಲು ಯಾರಿಗೂ ಕಷ್ಟವಾಗುವ ಹಳ್ಳಿಯ ಹೆಸರನ್ನು ಲಿಯಾಮ್  ಸುಲಲಿತವಾಗಿ ಉಲಿದ. ಆ ದಿನ ಬ್ರಿಟನ್ನಿನಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲುಗೊಂಡ ಹಳ್ಳಿಯಾಗಿತ್ತು ಇದು. ಈ ವಿಡಿಯೋ ಈಗ ವೈರಲ್ ಆಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com