

ಲಂಡನ್: ವಿಶ್ವದ ಅತ್ಯುತ್ತಮ 200 ವಿವಿಗಳಲ್ಲಿ ಭಾರತದ 2 ವಿದ್ಯಾಸಂಸ್ಥೆಗಳು ಸ್ಥಾನ ಪಡೆದಿವೆ. ಇದೇ ಮೊದಲ ಬಾರಿಗೆ ದೇಶದ ಶೈಕ್ಷಣಿಕ ಸಂಸ್ಥೆಗಳು ಇಂಥ ಸಾಧನೆ ಮಾಡಿವೆ.
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಗೆ 147 ಮತ್ತು ದೆಹಲಿಯಲ್ಲಿರುವ ಐಐಟಿ 179ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 235ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಉತ್ತಮ ಸಾಧನೆ ಮಾಡಿದೆ. ಕ್ಯೂಎಸ್ ವಲ್ರ್ಡ್ ಯುನಿವರ್ಸಿಟಿ ರ್ಯಾಂಕಿಂಗ್‍ನ ಪ್ರಸಕ್ತ ಸಾಲಿನ ಮೌಲ್ಯಮಾಪನದ ಪ್ರಕಾರ ಈ ದೇಶದ ಶಿಕ್ಷಣ ಸಂಸ್ಥೆಗಳಿಗೆ ಈ ಗೌರವ ಪ್ರಾಪ್ತಿಯಾಗಿದೆ.
ಈ ಪಟ್ಟಿಯ ಪ್ರಕಾರ ದೇಶದ 14 ಶಿಕ್ಷಣ ಸಂಸೆಟಛಿಗಳು ವಿಶ್ವದಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆಗಳಾಗಿವೆ. ಮೊದಲ ಸ್ಥಾನದಲ್ಲಿ ಮೆಸಾಚ್ಯುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮೊದಲ ಸ್ಥಾನ, ಹಾರ್ವರ್ಡ್ ವಿವಿ ದ್ವಿತೀಯ, ಸ್ಟ್ಯಾನ್ ಫೋರ್ಡ್ ವಿವಿ ತೃತೀಯ ಸ್ಥಾನ ಪಡಕೊಂಡಿದೆ.
34 ರಾಷ್ಟ್ರಗಳ 200 ವಿದ್ಯಾಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಪಟ್ಟಿಯಲ್ಲಿ 30 ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಐಐಎಸ್ಸಿ 147ನೇ ಸ್ಥಾನಗಳಿಸಿರುವುದಕ್ಕೆ ಸಂಸ್ಥೆಯ ಕಾರ್ಯ ವೈಖರಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.