ಹವಾಮಾನ ಮಾತುಕತೆಯಲ್ಲಿ ಭಾರತ ರಚನಾತ್ಮಕ ಪಾತ್ರ ವಹಿಸಲಿ: ಅಮೆರಿಕ

ಮುಂದಿನ ವಾರ ನರೇಂದ್ರ ಮೋದಿ ಮತ್ತು ಬರಾಕ್ ಒಬಾಮಾ ಮಧ್ಯೆ ಮಾತುಕತೆ ನಿಗದಿಯಾಗಿರುವ ಸಂದರ್ಭದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಮುಂದಿನ ವಾರ ನರೇಂದ್ರ ಮೋದಿ ಮತ್ತು ಬರಾಕ್ ಒಬಾಮಾ ಮಧ್ಯೆ ಮಾತುಕತೆ ನಿಗದಿಯಾಗಿರುವ ಸಂದರ್ಭದಲ್ಲಿ, ಭಾರತ ಹವಾಮಾನ ಕುರಿತ ಮಾತುಕತೆಯಲ್ಲಿ ಭಾರತ ಈ ವರ್ಷಾಂತ್ಯಕ್ಕೆ ಪ್ಯಾರಿಸ್ ನಲ್ಲಿ ರಚನಾತ್ಮಕ ಪಾತ್ರವನ್ನು ವಹಿಸಬೇಕೆಂದು ಅಮೆರಿಕ ಬಯಸುತ್ತದೆ. ವಿಶ್ವ ಹವಾಮಾನ ಕುರಿತ ಮಾತುಕತೆ ಪ್ಯಾರಿಸ್ ನಲ್ಲಿ ಈ ವರ್ಷಾಂತ್ಯಕ್ಕೆ ನಡೆಯಲಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗಬೇಕೆಂದು ಅಮೆರಿಕ ಒತ್ತಾಯಿಸುತ್ತಿದೆ.ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಮತ್ತು ವಿಶ್ವದ ಮೇಲೆ ಪ್ರಭಾವ ಬೀರುತ್ತಿರುವ ಆರ್ಥಿಕ ದೇಶವಾದ ಭಾರತಕ್ಕೆ ಹೆಚ್ಚುವರಿ ಅವಕಾಶಗಳನ್ನು ನೀಡಿದರೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಎರಡೂ ದೇಶಗಳ ಇತಿಹಾಸದ ಬಗ್ಗೆ ಮಾತನಾಡುವ ಅವಕಾಶವಿದೆ. ಒಬಾಮಾ ಅವರು, ಈ ವರ್ಷದ ಆರಂಭಕ್ಕೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರ್ಥಿಕ ಸಂಬಂಧ ಕುರಿತು ಮಾತನಾಡಿದ್ದರು. ಭಾರತದ ಬಗ್ಗೆ ಅಮೆರಿಕದ ನಿಲುವು ಬದಲಾಗುವುದಿಲ್ಲ ಎಂದು ಅರ್ನೆಸ್ಟ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com