ತಾಂತ್ರಿಕ ದೋಷದಿಂದ ರಸ್ತೆಗೆ ಇಳಿದ ವಿಮಾನ

ತಾಂತ್ರಿಕ ದೋಷದಿಂದ ಎಲ್ಲಿಗೋ ಹೋಗಬೇಕಿದ್ದ ವಿಮಾನ ನಡು ರಸ್ತೆಯಲ್ಲಿ ಇಳಿದು ಅಚ್ಚರಿಗೆ ಕಾರಣವಾದ ಘಟನೆಯೊಂದು ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕ್ಯಾಲಿಫೋರ್ನಿಯಾ: ತಾಂತ್ರಿಕ ದೋಷದಿಂದ ಎಲ್ಲಿಗೋ ಹೋಗಬೇಕಿದ್ದ ವಿಮಾನ ನಡು ರಸ್ತೆಯಲ್ಲಿ ಇಳಿದು ಅಚ್ಚರಿಗೆ ಕಾರಣವಾದ ಘಟನೆಯೊಂದು ನಡೆದಿದೆ.

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದ ಹೆದ್ದಾರಿಯಲ್ಲಿ ರೆಡ್ ಹಿಲ್ ಅವೆನ್ಯೂ ಎಂಬ ಸಣ್ಣ ವಿಮಾನವೊಂದು ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡು ತುರ್ತು ಭೂ ಸ್ಪರ್ಶ ಮಾಡಿದ್ದು, ಈ ಘಟನೆಯಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೊತೆಗೆ ಯಾವುದೇ ವಾಹನಗಳಿಗೂ ಹಾನಿಯಾಗಿಲ್ಲ.

ವಿಮಾನ ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಆಗಿರುವ ಈ ವಿಡಿಯೋ ವೈರಲ್ ಆಗಿದ್ದು ಈ ನಡುವೆ ಅಧಿಕಾರಿಗಳು ಘಟನೆಯ ಕುರಿತಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com