ಭಾರತದೊಂದಿಗೆ ಕೃಷಿ ಸಹಕಾರ ವೃದ್ಧಿಗೆ ಮುಂದಾದ ಉಕ್ರೇನ್

ಭಾರತದೊಂದಿಗೆ ಕೃಷಿ ಸಹಕಾರ ವೃದ್ಧಿಗೆ ಉಕ್ರೇನ್ ಮುಂದಾಗಿದ್ದು, ದ್ವಿಪಕ್ಷೀಯ ಕೃಷಿ ಸಹಕಾರ ಮಟ್ಟವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಉಕ್ರೇನ್ ನ ಕೃಷಿ ಸಚಿವ ಹೇಳಿದ್ದಾರೆ.
ಉಕ್ರೇನ್-ಭಾರತ
ಉಕ್ರೇನ್-ಭಾರತ
Updated on: 

ಕೀವ್: ಭಾರತದೊಂದಿಗೆ ಕೃಷಿ ಸಹಕಾರ ವೃದ್ಧಿಗೆ ಉಕ್ರೇನ್ ಮುಂದಾಗಿದ್ದು, ದ್ವಿಪಕ್ಷೀಯ ಕೃಷಿ ಸಹಕಾರ ಮಟ್ಟವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಉಕ್ರೇನ್ ನ ಕೃಷಿ ಸಚಿವ ಹೇಳಿದ್ದಾರೆ.

ಭಾರತ- ಉಕ್ರೇನ್ ನಡುವಿನ ಕೃಷಿ ಸಹಕಾರ ಗಮನಾರ್ಹ ಸಾಮರ್ಥ್ಯಹೊಂದಿದ್ದು, ವ್ಯಾಪಾರಕ್ಕೂ ಹೆಚ್ಚಿನ ಅನುಕೂಲವಾಗಲಿದೆ. 2015 ನೇ ಸಾಲಿನ ಮೊದಲ 8 ತಿಂಗಳಲ್ಲಿ ಭಾರತ- ಉಕ್ರೇನ್ ನಡುವಿನ ಕೃಷಿ ವ್ಯಾಪಾರ ವಹಿವಾಟು 795 .7 ಮಿಲಿಯನ್ ಡಾಲರ್ ದಾಟಿದೆ. ಕೃಷಿ ಮತ್ತು ಆಹಾರ ಉದ್ಯಮ ಸಹಕಾರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಹೊಸ ಒಪ್ಪಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಉಕ್ರೇನ್ ಕೃಷಿ ಸಚಿವರು ಹೇಳಿರುವುದನ್ನು ಮಾಧ್ಯಮವೊಂದು ವರದಿ ಮಾಡಿದೆ. ಕೃಷಿ ಸಹಕಾರದಲ್ಲಿ ಉಕ್ರೇನ್ ಬ್ಯುಸಿನೆಸ್ ಟು ಬ್ಯುಸಿನೆಸ್ ಮಾದರಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.
ಉಕ್ರೇನ್ ಅಧಿಕಾರಿಗಳ ಅಂಕಿ- ಅಂಶಗಳ ಪ್ರಕಾರ, ಉಕ್ರೇನ್- ಭಾರತ ನಡುವಿನ ಒಟ್ಟಾರೆ ವಹಿವಾಟು, ಕಳೆದ ವರ್ಷ ಶೇ. 12 ರಷ್ಟು ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com